ಬೆಂಗಳೂರು : ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಅಧಿಕಾರಾವಧಿಯು ಐಸಿಸಿ ಟಿ-20 ವಿಶ್ವಕಪ್ ಸರಣಿ ಮುಗಿಯುವರಿಗೆ ಮಾತ್ರ ಎನ್ನಲಾಗುತ್ತಿದ್ದು ಕರುನಾಡಿನ ಪುತ್ರ ಹಾಗೂ ಯುವ ಕ್ರಿಕೆಟ್ ಪ್ರತಿಭೆಗಳಿಗೆ ಸ್ಪೂರ್ತಿಯಾಗಿರುವ ರಾಹುಲ್ ದ್ರಾವಿಡ್ ಅವರೇ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಬಹುದು ಎಂದು ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಸೂಚನೆ ನೀಡಿದ್ದಾರೆ.
ಈ ಕುರಿತು ಹೇಡ್ ಕೋಚ್ ಆಗಿರುವ ರವಿಶಾಸ್ತ್ರಿ ಅವಧಿ ಮುಗಿಯಲಿದ್ದು, ಮತ್ತೊಂದೆಡೆ ರವಿಶಾಸ್ತ್ರಿ ಅವರು ತನ್ನ ಒಪ್ಪಂದವನ್ನು ವಿಸ್ತರಿಸುವ ಮನಸ್ಥಿತಿಯಲ್ಲಿಲ್ಲ ಎಂದು ಮೊದಲೇ ಹೇಳಿಕೊಂಡಿದ್ದಾರೆ ಎಂದು ವರಿದಿಯಾಗಿದೆ. ಟಿ- 20 ವಿಶ್ವಕಪ್ 2021 ಯುಎಇಯಲ್ಲಿ ಅಕ್ಟೋಬರ್‌ನಲ್ಲಿ ಆರಂಭವಾಗಲಿದ್ದು ಈ ಟಿ-20 ವಿಶ್ವಕಪ್‌ನ ನಂತರ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಈ ಹಿಂದೆ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ತೊರೆಯಬಹುದು ಎಂಬ ಸುದ್ದಿ ಇತ್ತು. ಆದರೆ ಈ ವರದಿಗಳನ್ನು ಬಿಸಿಸಿಐ ತಳ್ಳಿ ಹಾಕಿತ್ತು ಮತ್ತು ಕೊಹ್ಲಿ ಟೀಂ ಇಂಡಿಯಾದ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು.

ಇದೇ ಸಮಯದಲ್ಲಿ ಟೀಂ ಇಂಡಿಯಾದ ಮುಖ್ಯ ತರಬೇತುದಾರನ ಬಗ್ಗೆ ದೊಡ್ಡ ಬದಲಾವಣೆಯನ್ನು ಕಾಣಬಹುದು, ಬಿಸಿಸಿಐ ಮೂಲಗಳ ಪ್ರಕಾರ ರವಿಶಾಸ್ತ್ರಿ ಅವರ ಅವಧಿ ಮುಗಿದ ನಂತರ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ನಂತರ ಈ ಹೇಡ್ ಕೋಚ್ ಸ್ಥಾನವನ್ನು ರಾಹುಲ್ ದ್ರಾವಿಡ್ ಮುನ್ನಡೆಸಲಿದ್ದು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಬಹುದು ಎಂದು ಸ್ವತಃ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಇದನ್ನು ಸೂಚಿಸಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆಯಲ್ಲಿ ರವಿಶಾಸ್ತ್ರಿ ಅವರ ಅಧಿಕಾರಾವಧಿ ಮುಗಿದ ನಂತರ ರಾಹುಲ್ ದ್ರಾವಿಡ್ ಅವರಿಗೆ ಕೋಚ್ ಜವಾಬ್ದಾರಿಯನ್ನು ನೀಡಬಹುದು ಎಂದು ಸೂಚಿಸಿದ್ದಾರೆ.ದ್ರಾವಿಡ್ ಅವರನ್ನು ತಾತ್ಕಾಲಿಕವಾಗಿ ತಂಡದ ಕೋಚ್ ಆಗಿ ಮಾಡಲಾಗಿದೆ ಆದರೆ ದ್ರಾವಿಡ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕೆಲಸ ಹೆಚ್ಚಿನ ಆಸಕ್ತಿಯನ್ನು ಹೊಂದಿಲ್ಲ ನಾವು ಕೂಡ ಮುಂದೆ ಏನಾಗುತ್ತದೆ ಎಂದು ಹೆಚ್ಚಿನ ಯೋಚನೆ ಮಾಡಿಲ್ಲ ಆದರೆ ಕಾದು ನೋಡಬೇಕಾಗುತ್ತದೆ ಎಂದು ಸೂಚನೆ ನೀಡಿರುವ ಗಂಗೂಲಿ ಮಾಧ್ಯಮಗಳಿಗೆ ಕೋಚ್ ಹುದ್ದೆಗೆ ಸಂಬಂಧಿಸಿದಂತೆ ಇದುವರೆಗೂ ರಾಹುಲ್ ದ್ರಾವಿಡ್ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿದರು.