ಮೈಸೂರು: ದೇವಸ್ಥಾನಗಳ ತೆರವಿಗೆ ಜಿಲ್ಲಾಡಳಿತ ತಾತ್ಕಲಿಕ ಬ್ರೇಕ್ ಹಾಕಿದೆ. ದೇವಸ್ಥಾನಗಳ ತೆರವು ಕಾರ್ಯಚರಣೆಯನ್ನು ನಿಲ್ಲಿಸುವಂತೆ ಜಿಲ್ಲಾಡಳಿತ ಮೌಖಿಕ ಸೂಚನೆ ನೀಡಿದೆ.
ನಂಜನಗೂಡಿನ ದೇವಸ್ಥಾನವನ್ನು ದಿಢೀರ್ ತೆರವು ಮಾಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದು ಮೈಸೂರಿನಲ್ಲಿ ರಾಜಕೀಯ ಸ್ವರೂಪ ಪಡೆದುಕೊಳ್ಳುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಜನರು ತಮ್ಮ ವಿರುದ್ಧ ಮುಗಿಬೀಳುವ ಸುಳಿವು ಸಿಗುತ್ತಲೇ ಎಚ್ಚೆತ್ತ ಸಂಸದ ಪ್ರತಾಪ್ ಸಿಂಹ ಎಂದಿನಂತೆ ಒಂದೆರಡು ವಿವಾದಾತ್ಮಕ ಹೇಳಿಕೆ ಜೊತೆ ಟೆಂಪಲ್ ಪಾಲಿಟಿಕ್ಸ್ ಗೆ ಮುನ್ನುಡಿ ಬರೆದಿದ್ರು.

ಇನ್ನೂ ರಾಜ್ಯದಲ್ಲಿ ತಮ್ಮದೇ ಸರ್ಕಾರ, ತಾವೇ ಪ್ರತಿನಿಧಿಸುವ ಕ್ಷೇತ್ರದಲ್ಲಿ ಏನು ಆಗ್ತಿದೆ ಎಂಬುವುದು ಸಂಸದರಿಗೆ ಗೊತ್ತಿರಲಿಲ್ಲವೇ? ತಮ್ಮ ಸರ್ಕಾರದ ಅಧಿಕಾರಿಗಳು ದೇವಸ್ಥಾನ ತೆರವು ಕಾರ್ಯಾಚರಣೆ ಮಾಡುತ್ತಿರುವ ವಿಷಯ ಕೇಸರಿ ಕಲಿಗಳಿಗೆ ಗೊತ್ತು ಇರಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಸದ್ಯ ಜಿಲ್ಲಾಡಳಿತ ಕೇವಲ ಮೌಖಿಕ ಸೂಚನೆಯನ್ನ ಮಾತ್ರ ನೀಡಿದ್ದು, ಮುಂದೆ ದೇವಸ್ತಾನ ತೆರವು ಮಾಡಲ್ಲ ಅನ್ನೋದಕ್ಕೆ ಏನು ಸಾಕ್ಷಿ ಎಂದು ಭಕ್ತಗಣ ಪ್ರಶ್ನೆ ಮಾಡಿದೆ. ಇನ್ನು ಬಿಜೆಪಿ ಬೆಂಬಲಿತ ಕೆಲ ಮಾಧ್ಯಮಗಳು ಇದು ಪ್ರತಾಪ್ ಸಿಂಹ ಸಾಧನೆ ಎಂಬಂತೆ ಸಂಸದರ ಬೆನ್ನು ತಟ್ಟಿ ಸುದ್ದಿ ಪ್ರಕಟಿಸುತ್ತಿವೆ. ಇದನ್ನೂ ಓದಿ: 13 ಹಾರರ್ ಸಿನ್ಮಾ ನೋಡಿ 95 ಸಾವಿರ ಗೆಲ್ಲಿ – ಷರತ್ತುಗಳು ಅನ್ವಯ