ಮೊಹಾಲಿ : ಭಾರತದ ಶೂಟರ್ ನಮನ್ವೀರ್ ಸಿಂಗ್ ಬ್ರಾರ್ ಇಂದು ಮುಂಜಾನೆ ಇಲ್ಲಿನ ಸೆಕ್ಟರ್ 71 ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಈ ನಿರ್ಧಾರದ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅವರ ಮರಣೋತ್ತರ ಪರೀಕ್ಷೆಯನ್ನು 6 ನೇ ಹಂತದ ಸಿವಿಲ್ ಆಸ್ಪತ್ರೆಯಲ್ಲಿ ನಡೆಸಲಾಯಿತು ಮತ್ತು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದು ಡಿಎಸ್‌ಪಿ (City 1) ಗುರುಶೇರ್ ಸಿಂಗ್ ಸಂಧು ಹೇಳಿದ್ದಾರೆ.

ಮುಂಜಾನೆ ಸುಮಾರು 3.30ರ ಸುಮಾರಿಗೆ 28 ವರ್ಷದ ನಮನ್ವೀರ್ ಸಿಂಗ್ ಬ್ರಾರ್ ತನ್ನ ಲೈಸೆನ್ಸ್ ಇದ್ದ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಘಟನೆ ನಡೆದಾಗ ಆತನ ಪೋಷಕರು ಮತ್ತು ಪತ್ನಿ ಮನೆಯಲ್ಲಿದ್ದರು. ಅವರ ಪತ್ನಿ ಶೀಘ್ರದಲ್ಲೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಬ್ರಾರ್ ರವರು ಈ ವರ್ಷದ ಮಾರ್ಚ್ ನಲ್ಲಿ ದೆಹಲಿಯಲ್ಲಿ ನಡೆದ ಶೂಟಿಂಗ್ ವಿಶ್ವಕಪ್ ನಲ್ಲಿ ಕನಿಷ್ಠ ಅರ್ಹತಾ ಸ್ಕೋರ್ (MQS) ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. 2015 ರಲ್ಲಿ ಅವರು ದಕ್ಷಿಣ ಕೊರಿಯಾದ ಗ್ವಾಂಗ್ಜುವಿನಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಡಬಲ್-ಟ್ರ್ಯಾಪ್ ಸ್ಪರ್ಧೆಯಲ್ಲಿ ಕಂಚು ಪಡೆದಿದ್ದರು.