ವಾಷಿಂಗ್ಟನ್: ಕಂಪನಿಯೊಂದು 13 ಹಾರರ್ ಸಿನಿಮಾಗಳನ್ನು ನೋಡುವ ವ್ಯಕ್ತಿಹೆ ಅಮೆರಿಕದ ಫೈನಾನ್ಸ್ ಬುಝ್ ಕಂಪನಿ ನಗದು ಬಹುಮಾನ ಘೋಷಿಸಿದೆ.

10 ದಿನಗಳಲ್ಲಿ ಕಂಪನಿ ಸೂಚಿಸಿದ ಒಟ್ಟು 13 ಸಿನಿಮಾಗಳನ್ನು ನೋಡಬೇಕು. ಈ ಸಿನಿಮಾ ನೋಡಿದ ವ್ಯಕ್ತಿಗೆ ಕಂಪನಿಗೆ ಅಕ್ಟೋಬರ್ ನಲ್ಲಿ 1,300 ಡಾಲರ್ (ಅಂದಾಜು 95 ಸಾವಿರ ರೂ.) ನೀಡಲಿದೆ. ನಿರಂತರವಾಗಿ ಈ ರೀತಿಯ ಸಿನಿಮಾ ನೋಡುವ ವ್ಯಕ್ತಿಯ ಮೇಲೆ ಈ ಚಿತ್ರಗಳು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನ ತಿಳಿಯುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ವರದಿಯಾಗಿದೆ.

ಯಾವ ರೀತಿಯ ಸಿನಿಮಾಗಳು ಅಂದ್ರೆ ದುಬಾರಿ ಬಜೆಟ್ ಅಥವಾ ಕಡಿಮೆ ಬಜೆಟ್ ಚಿತ್ರಗಳು ನೋಡುಗರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೇವೆ ಎಂಬುದನ್ನು ತಿಳಿಯಲಾಗತ್ತದೆ. ಇದರ ಜೊತೆ ಸಿನಿಮಾ ವೀಕ್ಷಿಸುತ್ತಿರುವ ಹೃದಯ ಬಡಿತವನ್ನು ಅತ್ಯಾಧುನಿಕ ವೈದ್ಯಕೀಯ ಉಪಕರಣ ಬಳಸಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಸಿನಿಮಾದ ಶೇ.50ರಷ್ಟು ವೆಚ್ಚವನ್ನು ಕಂಪನಿಯೇ ನೋಡಿಕೊಳ್ಳಲಿದೆ. ಸಿನಿಮಾ ನೋಡಲು ಇಚ್ಛಿಸುವವರು 18 ವರ್ಷ ಮೇಲ್ಪಟ್ಟವರು ಸೆ.26ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಮತ್ತೆ ಹಾರಲು ಸಜ್ಜಾಯ್ತು ಜೆಟ್ ಏರ್‌ವೇಸ್

13 ಸಿನಿಮಾಗಳು ಹೀಗಿವೆ: Saw, Get Out, Amityville Horror, Annabelle, A Quiet Place Part 2, The Purge, Candyman, Insidious, The Blair Witch Project, Sinister, Halloween (2018), Paranormal Activity, A Quiet Place.