ಲಖ್ನೌ : ಉತ್ತರ ಪ್ರದೇಶ ಸರ್ಕಾರದ ಜಾಹೀರಾತಿನಲ್ಲಿ ಕೋಲ್ಕತ್ತಾದ ಫ್ಲೈಓವರ್ ಛಾಯಾಚಿತ್ರವನ್ನು ಬಳಸಿದ್ದಕ್ಕಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಕ್ಷಮೆಯಾಚಿಸಿದೆ. ಜಾಹೀರಾತನ್ನು ಪತ್ರಿಕೆಯ ಮಾರ್ಕೆಟಿಂಗ್ ವಿಭಾಗ ಸಿದ್ಧಪಡಿಸಿದೆ ಎಂದು ಪತ್ರಿಕೆ ಹೇಳಿದೆ.

ಇತ್ತಿಚೇಗೆ ಉತ್ತರಪ್ರದೇಶ ಸರ್ಕಾರ ತನ್ನ ಅಭಿವೃದ್ದಿಯನ್ನು ತೋರಿಸುವ ಕುರಿತು ಆಂಗ್ಲ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿತ್ತು, ಆ ಜಾಹೀರಾತು ಪ್ರಕಟಗೊಂಡ ದಿನವೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಆಕ್ಷೇಪ ಹೊರ ಹಾಕುವುದರೊಂದಿಗೆ ಗೇಲಿಯನ್ನು ಸಹ ಮಾಡಿತ್ತು ಇದಕ್ಕೆ ಕಾರಣ ಉತ್ತರಪ್ರದೇಶ ಸರ್ಕಾರ ಅಭಿವೃದ್ದಿ ಅಂತ ತೋರಿಸುವ ಜಾಹೀರಾತಿನಲ್ಲಿ ಕೋಲ್ಕತ್ತಾದ ಫ್ಲೈಓವರ್ ಒಂದರ ಛಾಯಾಚಿತ್ರ ಪ್ರಕಟವಾಗಿತ್ತು.
ಇದನ್ನೂ ಓದಿ : Mysuru Dasara: ನಾಡಹಬ್ಬ ದಸರಾ – ಗಜಪಡೆ ಪ್ರಯಾಣ ಇಂದಿನಿಂದ ಶುರು
ಈ ಕುರಿತು ಟ್ವೀಟ್ ಮಾಡಿರುವ ಪತ್ರಿಕೆ “ಪತ್ರಿಕೆಯ ಮಾರ್ಕೆಟಿಂಗ್ ವಿಭಾಗವು ತಯಾರಿಸಿದ ಉತ್ತರ ಪ್ರದೇಶದ ಜಾಹೀರಾತು ಕವರ್ ಕೊಲಾಜ್‌ನಲ್ಲಿ ತಪ್ಪು ಚಿತ್ರವನ್ನು ಅಜಾಗರೂಕತೆಯಿಂದ ಸೇರಿಸಲಾಗಿದೆ. ಈ ತಪ್ಪಿಗಾಗಿ ವಿಷಾದಿಸುತ್ತದೆ ಮತ್ತು ಪತ್ರಿಕೆಯ ಎಲ್ಲಾ ಡಿಜಿಟಲ್ ಆವೃತ್ತಿಗಳಲ್ಲಿ ಚಿತ್ರವನ್ನು ತೆಗೆದುಹಾಕಲಾಗಿದೆ” ಎಂದು ಬರೆದುಕೊಂಡಿದೆ.
A wrong image was inadvertently included in the cover collage of the advertorial on Uttar Pradesh produced by the marketing department of the newspaper. The error is deeply regretted and the image has been removed in all digital editions of the paper.
— The Indian Express (@IndianExpress) September 12, 2021
ಈ ಕುರಿತು ಆಕ್ರೋಶವನ್ನು ಹೊರಹಾಕಿದ ಟ್ವೀಟ್ಟಿಗರು ಹಾಗಾದರೆ ಮುದ್ರಿತ ಆವೃತ್ತಿಗಳ ಬಗ್ಗೆ ಏನು? ನೀವು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬ ಟ್ವೀಟ್ಟಿಗ, ಮೂಲ ನಿಯಮವೊಂದು ಇದೆ ಅದರ ಪ್ರಕಾರ ‘ಯಾವಾಗಲೂ ಕ್ಲೈಂಟ್‌ಗಳು (ಯೋಗಿ ಸರ್ಕಾರ) ಜಾಹೀರಾತಿನ ಅಂತಿಮ ವಿನ್ಯಾಸವನ್ನು ಅನುಮೋದಿಸಬೇಕು … ಏಜೆನ್ಸಿಯಲ್ಲ (ಇಂಡಿಯನ್ ಎಕ್ಸ್‌ಪ್ರೆಸ್)’ ಎಂದು ಬರೆದಿದ್ದಾರೆ.
There is a basic rule:
— Siddharth (@ethicalsid) September 12, 2021
The client(Yogi Govt) has to approve the final creatives both design and copy…not the agency(Indian Expres)