ದೆಹಲಿ : ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಬಾಲಿವುಡ್‌ನ ಖ್ಯಾತ ನಟ ಮತ್ತು ನಿರ್ಮಾಪಕರೊಬ್ಬರಿಗೆ ಪತ್ರ ಬರೆದು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಆ ನಟ ತಮ್ಮ ನೋವಿನಲ್ಲೂ ಜತೆಯಾಗಿ ಸಂತಾಪ ಸೂಚಿಸಿದ ಪ್ರಧಾನಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗಾದರೆ ಆ ನಟ ಯಾರು ಮತ್ತು ಪ್ರಧಾನಿಯವರ ಸಂತಾಪ ಪತ್ರ ಯಾವ ಕಾರಣಕ್ಕೆ ಇರಬಹುದು ಅನ್ನುವ ಮಾಹಿತಿ ಕೊಡುತ್ತೇವೆ ಬನ್ನಿ.

ಇತ್ತಿಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ತೀವ್ರ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ ವಿಚಾರವನ್ನು ಅಕ್ಷಯ್ ಇದೀಗ ಬಹಿರಂಗಪಡಿಸಿದ್ದಾರೆ.

ಮೋದಿ ತಮ್ಮ ಪತ್ರದಲ್ಲಿ, ‘ಭಾರತೀಯ ಚಿತ್ರರಂಗದಲ್ಲಿ ಅಕ್ಷಯ್ ಕುಮಾರ್ ತಮ್ಮದೇ ಛಾಪು ಮೂಡಿಸಲು ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಆ ಹೋರಾಟಕ್ಕೆ ಅವರ ಪೋಷಕರು ತುಂಬಿದ ಮೌಲ್ಯಗಳೇ ಕಾರಣ’ ಎಂದು ಅಕ್ಷಯ್ ಪೋಷಕರನ್ನು ಪ್ರಶಂಸಿಸಿದ್ದಾರೆ.
ಇದನ್ನೂ ಓದಿ : Mysore Temples; ಹಿಂದೂ ದೇವಸ್ಥಾನ ಬಚಾವೋ- ಜನಪ್ರತಿನಿಧಿಗಳಿಗೆ ಮೈಸೂರು ಜನರ ಸಾಮೂಹಿಕ ನಮಸ್ಕಾರ
ಇನ್ನು ಪ್ರಧಾನಿಗಳು ಕಳುಹಿಸಿರುವ ಪತ್ರವನ್ನು ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಹಂಚಿಕೊಂಡ ಅಕ್ಷಯ್ ಕುಮಾರ್ ‘ಅಮ್ಮನ ನಿಧನಕ್ಕೆ ಸಂತಾಪ ಸೂಚಿಸಿದ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಕೃತಜ್ಞತೆಗಳು ಈ ಸಮಾಧಾನಕರ ಮಾತುಗಳು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತವೆ’ ಜೈ ಅಂಬೆ. ಎಂದು ಬರೆದುಕೊಂಡಿದ್ದಾರೆ.
Humbled by condolence messages on mom’s passing, thankful to all🙏🏻Grateful to hon’ble PM for this amazing gesture to take out time and express warm feelings for me and my late parents. These comforting words will stay with me forever. Jai Ambe pic.twitter.com/22lDjZfEE6
— Akshay Kumar (@akshaykumar) September 12, 2021