ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡುತ್ತಿದ್ದು, ಮಣಿಕರ್ಣಿಕಾ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದಾ ವಿವಾದಾತ್ಮಕ ಸುದ್ದಿಗಳಿಂದಲೇ ಬಿಟೌನ್ ಗಲ್ಲಿಗಳಲ್ಲಿ ಸದ್ದು ಮಾಡುವ ಕಂಗನಾ ರಣಾವತ್ ಮತ್ತೊಮ್ಮೆ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದಾರೆ. ಪ್ರತಿಭೆ ಇದ್ರೆ ಬಿಟೌನ್ ಸಹ ನಡುಗಿಸಬಹುದು ಅನ್ನೋದನ್ನ ಕಂಗನಾ ಮತ್ತೊಮ್ಮೆ ಪ್ರೂವ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಯೆಸ್, ಈ ಶುಕ್ರವಾರ ತಮಿಳುನಾಡಿನ ತಲೈವಿ, ಪುರುಚ್ಚಿ, ಅಮ್ಮ ದಿ.ಮಾಜಿ ಸಿಎಂ ಜಯಲಲಿತಾ ಜೀವನಾಧರಿತ ಸಿನಿಮಾದಲ್ಲಿ ಅಕ್ಷರಶಃ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ ಕಂಗನಾ ರಣಾವತ್. ಸಿನಿಮಾದ ಡೈಲಾಗ್ ಡೆಲಿವರಿಯನ್ನು ಕಣ್ಮುಚ್ಚಿ ಕೇಳಿದ್ರೆ ಜಯಲಲಿತಾ ಕಣ್ಮುಂದೆಯೇ ಬರ್ತಾರೆ. ಜಯಲಲಿತಾರ ಸೂಕ್ಷ್ಮವಾದ ತಿರುಗೇಟು ನೀಡುವ ಆ ಝಲಕ್ ಗೆ ಕಂಗನಾ ಜೀವ ನೀಡಿದ್ದಾರೆ. ಇನ್ನೂ ಕರುಣಾನಿಧಿಯವರ ಪಾತ್ರ ಕೊನೆಯವರೆಗೂ ನಿಮ್ಮನ್ನು ಸೆಳೆಯುತ್ತದೆ.

1980ರ ಘಟ್ಟದಲ್ಲಿ ಜಯಲಲಿತಾ ಅವರನ್ನ ತೆರೆ ಮೇಲೆ ಕಂಡವರು ಇಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುವಲ್ಲಿ ಕಂಗನಾ ಪ್ರಯತ್ನ ಮೆಚ್ಚುವಂತದ್ದು. ಜಯಾ ಅವರ ಆ ಕಿರುನಗೆ, ಕಣ್ಣಂಚಿನ ತೀಕ್ಷ್ಣ ನೋಟ ಮತ್ತೊಮ್ಮೆ ಕಣ್ಮುಂದೆ ಸುಳಿದಂತಾಗಿದೆ. ಸಿನಿಮಾ, ವೈಯಕ್ತಿಯ ಬದುಕನ್ನ ಸ್ಪಷ್ಟವಾಗಿ ಯಾವುದೇ ವಿವಾದಗಳಿಲ್ಲದೇ ಕಟ್ಟಿಕೊಡುವಲ್ಲಿ ನಿರ್ದೇಶಕ ವಿಜಯ್ ಯಶಸ್ವಿಯಾಗಿದ್ದಾರೆ.

ಕಲಾ ನಿರ್ದೇಶನ, ಸರಳ ಕಥೆ, ಸಂಭಾಷನೆ, ಮೇಕಪ್, ವಸ್ತ್ರ ವಿನ್ಯಾಸ, ನೃತ್ಯ ಮತ್ತು ಸಿನಿಮಾ ಸೆಟ್ ಗಳು ವೀಕ್ಷಕರನ್ನು 80-90ರ ಕಾಲಘಟ್ಟಕ್ಕೆ ಕರೆದೊಯ್ಯುತ್ತೆ. ಮೊದಲ ಅಧಿವೇಶದಲ್ಲಿಯೇ ದೆಹಲಿಯಲ್ಲಿ ಗುಡುಗಿದ್ದ ದೃಶ್ಯ, ತಮಿಳುನಾಡಿನ ವಿಧಾನಸಭೆಯಲ್ಲಾದ ಅವಮಾನ, ತನ್ನಿಂದವರಿಂದಲೇ ಮೋಸವಾದಾಗ, ಶುಭ ಸುದ್ದಿಗೆ ಕಾಯುತ್ತಿರುವಾಗ ಬಂದ ಆಘಾತ, ಆಪ್ತನನ್ನ ಕಳೆದುಕೊಂಡಾದ ಅಂತಿಮ ದರ್ಶನಕ್ಕೆ ಅಡ್ಡಿ ಮಾಡಿದ ದೃಶ್ಯಗಳು ಹೃದಯ ಕಲಕುವಂತಿದೆ. ಇದನ್ನೂ ಓದಿ: ಕಾಂಗ್ರೆಸ್ ಬಿಡುವಾಗ ಎಷ್ಟು ಹಣ ಬೇಕು ಅಂತ ಬಿಜೆಪಿ ಕೇಳಿತ್ತು: ಶ್ರೀಮಂತ್ ಪಾಟೀಲ್

ತನು ವೆಡ್ಸ್ ಮನು, ಕ್ವೀನ್ ಮತ್ತು ಮಣಿಕರ್ಣಿಕಾ ಬಳಿಕ ತಲೈವಿ ಚಿತ್ರ ಕಂಗನಾ ನಟನೆಯ ಅಗ್ರಸ್ಥಾನದಲ್ಲಿ ಇರಲಿದೆ. ಎಲ್ಲರಿಗೂ ಈ ತರಹದ ಐತಿಹಾಸಿಕ ಪಾತ್ರಗಳು ಸಿಗಲ್ಲ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿರುವ ಕಂಗನಾ ದಕ್ಷಿಣ ಭಾರತದ ಸಿನಿಮಾ ಲೋಕದ ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಗುಳಿ ಕೆನ್ನೆ ಚೆಲುವೆಗೆ ತಲೈವಿಯ ಗಿಫ್ಟ್