ಬೆಂಗಳೂರು: ಸಾರ್ವಜನಿಕ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿ ಮಲಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ನೆಲಮಂಗಲ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಅವ್ಯವಸ್ಥೆ ಕಂಡುಬಂದಿದೆ. ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಬೇಸರಗೊಂಡ ರೋಗಿಗಳೇ ಈ ಫೋಟೋ, ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯೊಳಗೆ ನುಗ್ಗುವ ಬೀದಿನಾಯಿಗಳು ರೋಗಿಗಳ ಆಹಾರಕ್ಕೆ ಬಾಯಿ ಹಾಕಿ, ಗಲೀಜು ಮಾಡುತ್ತಿವೆ. ಇನ್ನೂ ನಾಯಿಗಳ ಬೆಡ್ ಮೇಲೆಯೇ ಮಲಗೋದರಿಂದ ಸ್ವಚ್ಛತೆ ಎಂಬ ಪದವನ್ನು ಆಸ್ಪತ್ರೆಯಲ್ಲಿ ಹುಡುಕಬೇಕಿದೆ. ಇದನ್ನೂ ಓದಿ: ಹಿಂದೂ ದೇವಾಲಯಗಳೇ ಟಾರ್ಗೆಟ್ ಏಕೆ? ಚರ್ಚ್, ಮಸೀದಿ ಕಾಣಲ್ವಾ?: ಪ್ರತಾಪ್ ಸಿಂಹ

ಆಸ್ಪತ್ರೆಯ ಬಳಿಯೇ ನಾಯಿಗಳು ಬೀಡು ಬಿಟ್ಟಿರೋದರಿಂದ ಸಾರ್ವಜನಿಕರು ಹೆದರಿಕೊಂಡೇ ಚಿಕಿತ್ಸೆ ಬರುವಂತಾಗಿದೆ. ಆಸ್ಪತ್ರೆಗೆ ಮಕ್ಕಳು ಸೇರಿದಂತೆ ವೃದ್ಧರು ಆಗಮಿಸುತ್ತಾರೆ. ಅವರ ಮೇಲೆಯೂ ನಾಯಿಗಳು ದಾಳಿ ನಡೆಸುವ ಸಾಧ್ಯತೆಗಳಿವೆ. ಹಾಗಾಗಿ ಬೀದಿನಾಯಿಗಳ ಹಾವಳಿಗೆ ನಿಯಂತ್ರಣ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಭವಾನಿಪುರ ಬೈ ಎಲೆಕ್ಷನ್ – ದೀದಿ ವಿರುದ್ಧ ಕಣಕ್ಕಿಳಿದಿರುವ ಪ್ರಿಯಾಂಕಾ ನಾಳೆ ನಾಮಪತ್ರ ಸಲ್ಲಿಕೆ