ಮೈಸೂರು: ಕೇವಲ ಹಿಂದೂ ದೇವಾಲಯಗಳನ್ನ ಟಾರ್ಗೆಟ್ ಮಾಡುತ್ತಿರೋದು ಏಕೆ? ಅಧಿಕಾರಿಗಳಿಗೆ ಚಚ್, ಮಸೀದಿಗಳು ಕಾಣಿಸುತ್ತಿಲ್ಲವಾ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ತೆರವು ಮಾಡಲು ಹೊರಟಿರುವ 101 ಗಣಪತಿ ದೇವಸ್ಥಾನಕ್ಕೆ ಇತಿಹಾಸವಿದೆ. ಇತಿಹಾಸ ಪರಿಗಣಿಸದೇ ದೇವಾಲಯ ತೆರವು ಮಾಡಲು ಹೊರಟರೆ ಮನಸ್ಸಿಗೆ ನೋವಾಗುತ್ತದೆ. ಈ ತರಹದ ಕೆಲಸಗಳಿಂದ ಜನರ ಭಾವನೆಗಳಿಗೆ ಧಕ್ಕೆಯಾಗಲಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬೆಂಗಳೂರಿನ ಆರೋಗ್ಯ ವ್ಯವಸ್ಥೆ ಸರಿ ಇಲ್ಲ ಅಂದ್ರು ಸಿಎಂ ಬೊಮ್ಮಾಯಿ
ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪತ್ರಿಕಾ ಗೋಷ್ಠಿ ನಡೆಸಲಾಯಿತು .
— Pratap Simha (@mepratap) September 12, 2021
ಇದೇ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಶ್ರೀವತ್ಸ ರವರು, ಪೂಜ್ಯ ಮಹಾ ಪೌರರಾದ ಶ್ರೀಮತಿ ಸುನಂದಾ ಪಾಲನೇತ್ರ ರವರು,
ಹಾಗೂ ನಮ್ಮ ಪಕ್ಷದ ಮುಖಂಡರು ಉಪಸ್ಥಿತರಿದ್ದರು . pic.twitter.com/2GmxcT3Ehi
ಹುಚ್ಚಗಣಿ ದೇವಾಲಯವನ್ನು ಕಳ್ಳರಂತೆ ಬೆಳಗಿನ ಜಾವ 4 ಗಂಟೆಗೆ ನೆಲಸಮ ಮಾಡಿದ್ದೀರಿ. ಇದರಿಂದ ಜನರ ಆತಂಕ ಉಂಟಾಗುತ್ತದೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಸುಪ್ರೀಂಕೋರ್ಟ್ ಆದೇಶ ಎಂದು ಹೇಳ್ತೀರಿ. ಯಾಕೆ ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ? ನಿಮ್ಮ ಕಣ್ಣಿಗೆ ಚರ್ಚ್, ಮಸೀದಿ ಕಾಣಲ್ವಾ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ಬಿಡುವಾಗ ಎಷ್ಟು ಹಣ ಬೇಕು ಅಂತ ಬಿಜೆಪಿ ಕೇಳಿತ್ತು: ಶ್ರೀಮಂತ್ ಪಾಟೀಲ್