ಮೈಸೂರು(ಸೆ.12): ನಗರದಲ್ಲಿ 92 ದೇವಾಲಯಗಳನ್ನು ತೆರವುಗೊಳಿಸಲು ಸೂಚಿಸಿರುವ ಮಹಾನಗರ ಪಾಲಿಕೆ ಆದೇಶಕ್ಕೆ ಮೈಸೂರಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಮೂಹಿಕ ನಮಸ್ಕಾರ ಮಾಡುವ ಮೂಲಕ ದೇವಸ್ಥಾನ ಸಂಹಾರ ಕೈಬಿಡಿ ಎಂದ ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆ ಪದಾಧಿಕಾರಿಗಳು ಕೈಮುಗಿದು ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನಂತೆ ಮೈಸೂರಿನ ನಗರದಲ್ಲಿ 92 ದೇವಸ್ಥಾನಗಳ ನೆಲಸಮ ಮಾಡುವ ಕಾರ್ಯವನ್ನು ಕೈಬಿಡಿ ಎಂದು ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆ ಆಗ್ರಹಿಸಿದೆ. ಇಂದು ಅಗ್ರಹಾರ ೧೦೧ ಗಣಪತಿ ದೇವಸ್ಥಾನದ ಮುಂಭಾಗ ಪದಾಧಿಕಾರಿಗಳು ಸಾಮೂಹಿಕ ನಮಸ್ಕಾರ ಮಾಡುವ ಮೂಲಕ ಮೈಸೂರಿನ ಜನಪ್ರತಿನಿಧಿಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಇದನ್ನೂ ಓದಿ : ತಲೈವಿ ಪಾತ್ರಕ್ಕೆ ಜೀವ ತುಂಬಿದ ಕ್ವೀನ್ – ಮಣಿಕರ್ಣಿಕಾ ಸಹಜ ನಟನೆಗೆ ಫ್ಯಾನ್ಸ್ ಫಿದಾ
ಇದೇ ಸಂಧರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ ಮಾತನಾಡಿ ಜನರ ನಂಬಿಕೆ ಭಾವನೆಗೆ ದಕ್ಕೆ ಬರದಂತೆ ಆಡಳಿತ ನೀಡುವುದು ಸರ್ಕಾರದ ಕರ್ತವ್ಯ, ಭಾರತಕ್ಕೆ ದಂಡಯಾತ್ರೆ ಬಂದು ನಾಶ ಮಾಡಿದ ಮೊಹಮ್ಮದ್ ಗಜನಿ ಮತ್ತ ಬ್ರಿಟೀಷರ ದಬ್ಬಾಳಿಕೆ ತರಹ ಆಳ್ವಿಕೆಯಿದೆಯೋ ಅಥವಾ ಪ್ರಜಾಪ್ರಭುತ್ವ ಆಡಳಿಯವಿದೆಯೋ ಎಂಬ ಪ್ರಶ್ನೆ ಕಾಡುತ್ತಿದೆ, ಪುರಾತನ ದೇವಸ್ಥಾನ ಗುಡಿ ಗೋಪುರ ಕೆಡವಿದರೆ ಹಿಂದೂ ಧರ್ಮವನ್ನ ಸರ್ವನಾಶ ಮಾಡಿದಂತೆ ಎಂದರು.
ಇದನ್ನೂ ಓದಿ : ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಆಯ್ಕೆ
ನಂತರ ಮಹಿಳಾ ಮುಖಂಡರಾದ ರೇಣುಕಾ ರಾಜ್‌ರವರು ಮಾತನಾಡಿ, ಅಗ್ರಹಾರ ಬಡಾವಣೆಗಳು ಧಾರ್ಮಿಕ ಕೇಂದ್ರಗಳಾಗಿದ್ದವು ಭಜನೆ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನಗಳಲ್ಲಿ ಪೂಜಾಪುನಸ್ಕಾರ ಹಲವಾರು ಜನರಿಗೆ ಮನಶಕ್ತಿ ಆತ್ಮಸ್ಥೈರ್ಯ ನೀಡುತ್ತದೆ ಹಾಗಾಗಿ ದೇವಸ್ಥಾನಗಳನ್ನು ಕೆಡವಲು ಮುಂದಾಗಬಾರದು ಅದಕ್ಕಾಗಿ ಸಾಮೂಹಿಕ ನಮಸ್ಕಾರ ಮಾಡುವ ಮೂಲಕ ಮನವಿ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ : ಹಿಂದೂ ದೇವಾಲಯಗಳೇ ಟಾರ್ಗೆಟ್ ಏಕೆ? ಚರ್ಚ್, ಮಸೀದಿ ಕಾಣಲ್ವಾ?: ಪ್ರತಾಪ್ ಸಿಂಹ
ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ನಿರ್ದೇಶಕರಾದ ರೇಣುಕರಾಜ ,ಮೃಗಾಲಯ ಪ್ರಾಧಿಕಾರ ಸದಸ್ಯರಾದ ಜ್ಯೋತಿ ರಚನಾ ,ನಾಗಮಣಿ ,ಮಹೇಂದ್ರ ಸಿಂಗ್ ಕಾಳಪ್ಪ ,ವಿಕ್ರಂ ಅಯ್ಯಂಗಾರ್,ಅಜಯ್ ಶಾಸ್ತ್ರಿ ,ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ , ಲಯನ್ ಸುರೇಶ್ , ಮಹೇಂದ್ರ ಶೈವ ,ಕೃಷ್ಣರಾಜ ಯುವಬಳಗದ ನವೀನ್ ಕೆಂಪಿ , ರಂಗಸ್ವಾಮಿ ,ಕಡಕೊಳ ಜಗದೀಶ್ ,ಬಸವರಾಜ್ ಬಸಪ್ಪ , ಸುಚೇಂದ್ರ ಹಾಗೂ ಇನ್ನಿತರರು ಹಾಜರಿದ್ದರು.