- ಆರೋಗ್ಯ ಸಚಿವರು ಬಹಳ ಬುದ್ಧಿವಂತರು, ಆದ್ರೆ ಕೆಲವೊಮ್ಮೆ ಅದೇ ಸಮಸ್ಯೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಆರೋಗ್ಯ ವ್ಯವಸ್ಥೆ ಸರಿ ಇಲ್ಲವೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ 108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ನೂತನ 120 ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಕೋವಿಡ್ ಸಂಕಷ್ಟ ಕಾಲದಲ್ಲಿ ಆರೋಗ್ಯ ಸಚಿವರು ಒಳ್ಳೆಯ ಕೆಲಸ ಮಾಡಿದರು. ಆದ್ರೆ ಬೆಂಗಳೂರು ಭಾಗಕ್ಕೆ ಪ್ರತ್ಯೇಕವಾದ ಆರೋಗ್ಯ ವ್ಯವಸ್ಥೆ ರಚನೆಯಾಗಬೇಕಿದೆ ಎಂದು ಹೇಳಿದರು.

ಅಂಬುಲೆನ್ಸ್ ಗಳಿಗೆ 108 ಅಂತ ಹೆಸರು ಏಕಿಟ್ರು ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ ಹಿಂದೆ ಶ್ರೀರಾಮುಲು ಅವರು 108 ಅಂಬುಲೆನ್ಸ್ ಯೋಜನೆ ಜಾರಿಗೆ ತಂದರು. ಗ್ರಾಮೀಣ ಭಾಗದಲ್ಲಿ ಜನರು ಇದನ್ನು 108 ಎಂದು ಕರೆಯುತ್ತಾರೆ. ಇಂದು ಹೊಸ ಅಂಬುಲೆನ್ಸ್ ಗಳ ಲೋಕಾರ್ಪಣೆ ಮಾಡುವ ಮೂಲಕ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದೆ. ಇದನ್ನೂ ಓದಿ: ಯಡಿಯೂರಪ್ಪರನ್ನ ದಿಢೀರ್ ಭೇಟಿಯಾದ ಕಟೀಲ್ – ಮಹತ್ವದ ಚರ್ಚೆ
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ನೂತನ 120 ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಲಾಯಿತು.@mla_sudhakar @sriramulubjp @STSomashekarMLA @BABasavaraja @MunirathnaMLA @PCMohanMP @SRVishwanathBJP pic.twitter.com/OH3YbQOTBp
— Basavaraj S Bommai (@BSBommai) September 12, 2021
ಆರೋಗ್ಯ ಇಲಾಖೆಯಲ್ಲಿ ಮಾತ್ರವಲ್ಲದೇ ಆರೋಗ್ಯ ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಮಾಡುತ್ತಿದ್ದಾರೆ. ಡಾ.ಕೆ.ಸುಧಾಕರ್ ಬಹಳ ಬುದ್ಧಿವಂತರು. ಆದ್ರೆ ಹೆಚ್ಚು ಬುದ್ಧಿವಂತರು ನಮಗೆ ಸಮಸ್ಯೆ ಎಂದು ಸುಧಾಕರ್ ಅವರ ಕಾಲೆಳೆದರು. ಇದನ್ನೂ ಓದಿ: ಕಲಬುರಗಿ ಪಾಲಿಕೆಯ ಮೇಯರ್ ಗದ್ದುಗೆ ಏರಲು ‘ದಳ’ಪತಿಗಳ ಹೊಸ ದಾಳ!