ಬೆಂಗಳೂರು: ನಾವು ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದೇವೆ. ಅದು ನಮ್ಮ ತಪ್ಪು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಲ್ಲಿನ ವಿಚಾರ, ಅಭ್ಯರ್ಥಿ ಶಕ್ತಿ ಮುಖ್ಯವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾನು, ದೇಶಪಾಂಡೆ ಅವರು, ಧೃವನಾರಾಯಣ ಅವರು, ಶಿವಾನಂದ ಪಾಟೀಲ್ ಅವರು, ಹುಬ್ಬಳ್ಳಿ-ಧಾರವಾಡದ ಎಲ್ಲ ಪ್ರಬುದ್ಧ ಮತದಾರರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಸಾಷ್ಟಾಂಗ ನಮಸ್ಕಾರ ಸಲ್ಲಿಸಲು ಬಂದಿದ್ದೇವೆ. ನಿಮ್ಮ ವಿಶ್ವಾಸ ಹಾಗೂ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇವೆ ಎಂದು ನಾವಿಂದು ಮಾತು ನೀಡುತ್ತೇವೆ.
ನಮಗೆ ಸಂಖ್ಯೆ ಕಡಿಮೆ ಬಂದಿರಬಹುದು, ನಮ್ಮ ಪಕ್ಷದ ಐವರು ಬಂಡಾಯ ಸದಸ್ಯರು ಗೆದ್ದಿದ್ದು, ಎಲ್ಲ ಒಟ್ಟಾಗಿ ಸೇರಿಸಿದರೆ ಕಾಂಗ್ರೆಸ್ ವಿಚಾರ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚು ಬೆಂಬಲ ಸಿಕ್ಕಿದೆ. ಇವರಾರೂ ಅಧಿಕಾರದಲ್ಲಿಲ್ಲ, ಪಕ್ಷ ಅಧಿಕಾರದಲ್ಲಿಲ್ಲ. ಬಿಜೆಪಿಯವರು 15 ವರ್ಷಗಳಿಂದ ಆಡಳಿತ ಮಾಡುತ್ತಿದ್ದು, ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಇಲ್ಲಿನವರೇ ಆಗಿದ್ದರು.

ಇಲ್ಲಿ ತಮಗೆ ಬೇಕಾದ ರೀತಿಯಲ್ಲಿ ಮೀಸಲಾತಿ ನಿಗದಿ ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನಮಗೆ ಸಂಖ್ಯಾಬಲ ಇಲ್ಲದಿದ್ದರೂ ಮತದಾರರು ನಮಗೆ ಉತ್ತಮ ಫಲಿತಾಂಶ ನೀಡಿದ್ದಾರೆ. ನಾವು ಜನರ ಸೇವೆ ಮುಂದುವರಿಸಿಕೊಂಡು ಹೋಗುತ್ತೇವೆ. ನಮ್ಮ ಸದಸ್ಯರು ಜನರ ಸೇವೆ ಮಾಡುತ್ತಾರೆ. ನಮ್ಮ ಬಂಡಾಯ ಅಭ್ಯರ್ಥಿಗಳು ಕರೆ ಮಾಡಿ ನಾವು ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲೇ ಉಳಿಯುತ್ತೇವೆ ಎಂದಿದ್ದಾರೆ.
ಕಲಬುರ್ಗಿ, ಹುಬ್ಬಳ್ಳಿ-ಧಾರವಾಡದ ಫಲಿತಾಂಶ ಸಮಾಧಾನ ತಂದಿದೆ. ತರೀಕೆರೆ, ಬೆಳಗಾವಿಯಲ್ಲಿ ನಾವು ಮೊದಲ ಬಾರಿಗೆ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದ್ದೆವು. ಹೀಗಾಗಿ ನಾವು ಧೃತಿಗೆಡುವ ಅಗತ್ಯವಿಲ್ಲ. ಈ ಫಲಿತಾಂಶ ಬಿಜೆಪಿ ಸರ್ಕಾರದ ಆಡಳಿತದ ಪರ ಬಂದಿದೆಯಾ? ಅಥವಾ ವಿರೋಧವಾಗಿ ಬಂದಿದೆಯಾ? ಎಂದು ಜಗದೀಶ್ ಶೆಟ್ಟರ್ ಅವರೇ ಹೇಳಬೇಕು. ಅವರೇ ಸರ್ಟಿಫಿಕೇಟ್ ನೀಡಲಿ.

ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದೇವೆ:
ಮುಂದೆಯೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ. ಬಳ್ಳಾರಿ, ತೀರ್ಥಹಳ್ಳಿ, ರಾಮನಗರದಲ್ಲಿ ಫಲಿತಾಂಶ ಬಂದು ನಾಲ್ಕು ತಿಂಗಳಾಗಿದೆ. ಜನರ ಕೈಗೆ ಅಧಿಕಾರ ನೀಡಬೇಕು. ಹೀಗಾಗಿ ಶೀಘ್ರ ಉಳಿದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ. ನಾವು ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದೇವೆ. ಅದು ನಮ್ಮ ತಪ್ಪು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಲ್ಲಿನ ವಿಚಾರ, ಅಭ್ಯರ್ಥಿ ಶಕ್ತಿ ಮುಖ್ಯವಾಗುತ್ತದೆ. ವಿಧಾನಸಭೆ ಹಾಗೂ ಸಂಸತ್ ಚುನಾವಣೆಯಲ್ಲಿ ಬೇರೆ ವಿಚಾರ ಮುಖ್ಯವಾಗುತ್ತದೆ. ಪಕ್ಷಗಳು ಏನೇ ಮಾಡಿದರೂ ಮತದಾರರು ಅವರದೇ ಲೆಕ್ಕಾಚಾರ ಮಾಡಿರುತ್ತಾರೆ.
ಅಧಿಕಾರ ದುರುಪಯೋಗ:
ನಮ್ಮ ಪಕ್ಷದಲ್ಲಿದ್ದವರು ಕೆಲವರು ಬೇರೆ ಪಕ್ಷಗಳಿಂದ ನಿಂತು ಗೆದ್ದಿದ್ದಾರೆ. ನಮಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದು. ಬೇಧ-ಭಾವ ಏನಿದ್ದರೂ ಬಿಜೆಪಿಯಲ್ಲಿದೆ. ನಮ್ಮ ನಾಯಕರು ಚುನಾವಣೆ ಪ್ರಚಾರಕ್ಕೆ ವಾರ್ಡ್, ವಾರ್ಡ್ ಗೂ ತೆರಳಿದ್ದಾರೆ. ಬಿಜೆಪಿಯವರಂತೆ ನಮಗೆ ಧನಶಕ್ತಿ ಇಲ್ಲದಿರಬಹುದು. ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಬಿಡುವಾಗ ಎಷ್ಟು ಹಣ ಬೇಕು ಅಂತ ಬಿಜೆಪಿ ಕೇಳಿತ್ತು: ಶ್ರೀಮಂತ್ ಪಾಟೀಲ್
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆ ಮಾಡುತ್ತಿರುವುದು, ರಾಜ್ಯಗಳಲ್ಲಿ ಅವರ ನಾಯಕತ್ವ ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯವಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ, ಉತ್ತಮ ಆಡಳಿತ ನೀಡಲು ಸಾಧ್ಯವಾಗಿಲ್ಲ ಎಂಬುದಕ್ಕೆ ಸಾಕ್ಷಿ. ಇದೇ ಕಾರಣಕ್ಕೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವರನ್ನು ಬದಲಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಆರೋಗ್ಯ ವ್ಯವಸ್ಥೆ ಸರಿ ಇಲ್ಲ ಅಂದ್ರು ಸಿಎಂ ಬೊಮ್ಮಾಯಿ
Held a meeting with the winning candidates of the Hubli-Dharwad Municipal Corporation Election, in the presence of KPCC working presidents Sri @RV_Deshpande and Sri R Dhruvanarayana, Former Minister Sri @Shivanand_S_P, Sri A.M Hindasgeri, Sri Santhosh Lad and Sri Srinivasa Mane. pic.twitter.com/0f1x4tYYk2
— DK Shivakumar (@DKShivakumar) September 12, 2021
ರೈತರಿಗೆ ಆಗಿರುವ ನಷ್ಟ ತುಂಬಿಕೊಡಲಿ:
ರಾಜ್ಯದಲ್ಲಿ ಕೋವಿಡ್ ನಿಂದ 4 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸಾವಿನ ಸಂಖ್ಯೆಯ ಆಡಿಟ್ ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಮೃತರ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂಬುದು ನಮ್ಮ ಬೇಡಿಕೆ. ಈ ವಿಚಾರವನ್ನು ನಾವು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. ನೂತನ ಮುಖ್ಯಮಂತ್ರಿಗಳು ಕೋವಿಡ್ ಸಮಯದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ, ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಿದವರಿಗೆ ಸಹಾಯ ಮಾಡಲಿ, ಸತ್ತವರಿಗೆ ಪರಿಹಾರ ನೀಡಲಿ, ಅಸಂಘಟಿತ ಕಾರ್ಮಿಕರು, ರೈತರಿಗೆ ಆಗಿರುವ ನಷ್ಟ ತುಂಬಿಕೊಡಲಿ. ಇದನ್ನೂ ಓದಿ: ಹಿಂದೂ ದೇವಾಲಯಗಳೇ ಟಾರ್ಗೆಟ್ ಏಕೆ? ಚರ್ಚ್, ಮಸೀದಿ ಕಾಣಲ್ವಾ?: ಪ್ರತಾಪ್ ಸಿಂಹ
ಮಹದಾಯಿ, ಕೃಷ್ಣ, ಮೇಕೆದಾಟು ವಿಚಾರದಲ್ಲಿ ಇಷ್ಟು ದಿನ ಬೊಮ್ಮಾಯಿ ಅವರು, ಶೆಟ್ಟರ್ ಅವರು ಏನು ಹೇಳುತ್ತಿದ್ದರು.?! ಈಗ ಅಧಿಕಾರ ಅವರ ಕೈಯಲ್ಲೇ ಇದೆ. ಈಗ ಏನು ಮಾಡುತ್ತೀರಾ ಎಂದು ಅವರನ್ನೇ ಕೇಳಿ ಎಂದರು. ಇದನ್ನೂ ಓದಿ: ಮೋದಿ ಸಪ್ರೈಸ್ – ನವದಂಪತಿ ಫುಲ್ ಖುಷ್