ಪಾಟೀದಾರ್ ಸಮುದಾಯದ ಓಲೈಕೆಗೆ ಬಿಜೆಪಿ ಪ್ಲಾನ್
ಗಾಂಧೀನಗರ: ಗುಜರಾತ್ ನೂತನನ ಸಿಎಂ ಆಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದೆ. ಈ ಮೂಲಕ ಮುಂದಿನ ವರ್ಷದ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಯಾರಿ ನಡೆಸಿದೆ. ಇಂದು ನಡೆದ ಬಿಎಲ್‍ಪಿ ಸಭೆಯಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಅವರೇ ಭೂಪೇಂದ್ರ ಪಟೇಲ್ ಹೆಸರನ್ನು ಸೂಚಿಸಿದರು.

ನಾಳೆ ಭೂಪೇಂದ್ರ ಪಟೇಲ್ ಅವರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿವೆ. ಭೂಪೇಂದ್ರ ಪಟೇಲ್ ಗುಜರಾತಿನ ಪಾಟೀದಾರ್ ಸಮುದಾಯದ ನಾಯಕರಾಗಿದ್ದಾರೆ. ಇದನ್ನೂ ಓದಿ: ಮೋದಿ ಸಪ್ರೈಸ್ – ನವದಂಪತಿ ಫುಲ್ ಖುಷ್
ಶುಕ್ರವಾರ ನಡೆದ ಕೋರ್ ಕಮೀಟಿ ಸಭೆಯಲ್ಲಿ ವಿಜಯ್ ರೂಪಾನಿ ಅವರನ್ನು ಕೆಳಗಿಳಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಹೈಕಮಾಂಡ್ ಆದೇಶದಂತೆ ವಿಜಯ್ ರೂಪಾನಿ ರಾಜೀನಾಮೆ ನೀಡಿದೆದರು. ಇದನ್ನೂ ಓದಿ: ಕಾಂಗ್ರೆಸ್ ಬಿಡುವಾಗ ಎಷ್ಟು ಹಣ ಬೇಕು ಅಂತ ಬಿಜೆಪಿ ಕೇಳಿತ್ತು: ಶ್ರೀಮಂತ್ ಪಾಟೀಲ್