- ಮಳೆಯಲ್ಲಿ ಅನ್ನದಾತರು
ನವದೆಹಲಿ: ಕಳೆದ ಎರಡು ದಿನಗಳಿಂದ ದೆಹಲಿ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ಗಡಿ ಭಾಗದಲ್ಲಿ ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರ ಪರಿಸ್ಥಿತಿ ಹೇಳತೀರದಾಗಿದೆ.

ಮಳೆ-ಗಾಳಿಗೆ ರೈತರು ಗಡಿಭಾಗದಲ್ಲಿ ಹಾಕಿಕೊಂಡಿದ್ದ ತಾತ್ಕಾಲಿಕ ಟೆಂಟ್ ಗಳು ನೆಲಸಮವಾಗಿವೆ. ದೆಹಲಿ ಭಾಗದಲ್ಲಿ ಗಾಳಿ ಗಂಟೆಗೆ ಸುಮಾರು 40-60 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ. ರೈತರ ಸುಮಾರು 100 ಟೆಂಟ್ ಗಳು ಹಾನಿಗಳಾಗಿವೆ ಎಂದು ವರದಿಯಾಗಿದೆ.

ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಅಬ್ಬರದ ಮಳೆಗೆ ಜನತೆ ಬೆಚ್ಚಿಬಿದ್ದಿದ್ದಾರೆ. ಈ ಬಾರಿಯ ಮಾನ್ಸೂನ್ ಮಳೆ 46 ವರ್ಷದ ಬಳಿಕ ದಾಖಲೆಯ ಮಳೆಯಾಗಿದೆ. ಈವರೆಗೂ ದೆಹಲಿಯಲ್ಲಿ 1,100 ಮಿಲಿ ಮೀಟರ್ ಮಳೆ ದಾಖಲಾಗಿದೆ. 2003ರಲ್ಲಿ 1050 ಮಿಲಿ ಮೀಟರ್ ಮಳೆ ದಾಖಲಾಗಿತ್ತು. 1975ರಲ್ಲಿ 1150 ಮಿಲಿ ಮೀಟರ್ ಮಳೆಯಾಗಿರುವುದು ಈವರೆಗಿನ ದಾಖಲೆಯಾಗಿದೆ. 1975 ಹೊರತುಪಡಿಸಿದರೆ ಈ ಬಾರಿಯ ಮಳೆ ಹೊಸ ದಾಖಲೆ ಸೃಷ್ಟಿಸಿದೆ. ಇದನ್ನೂ ಓದಿ: ವರುಣಾಘಾತ – ದೆಹಲಿಯಲ್ಲಿ 46 ವರ್ಷದ ಬಳಿಕ ಅತ್ಯಧಿಕ ಮಳೆ