ಹುಬ್ಬಳ್ಳಿ : ಜಾತಿ ಧರ್ಮಗಳ ಕಟ್ಟಳೆಗಳನ್ನು ಮೀರಿ ಧರ್ಮ ಸಾಮರಸ್ಯ ಸಾರಿದ ಪೋಲಿಸ್ ಅಧಿಕಾರಿಯೊಬ್ಬರು ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ, ನಗರದ ಗೋಕುಲ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪಾಷಾ ಖಾಲಿಮಿರ್ಚಿ ಎನ್ನುವ ಪೋಲಿಸ್ ಸಿಬ್ಬಂದಿಯೊಬ್ಬರು ತಮ್ಮ ಠಾಣೆಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನೇರವೇರಿಸಿದ್ದಾರೆ.

ದೇವನೋಬ್ಬ ನಾಮ ಹಲವು ಎನ್ನುವ ಸಿದ್ದಾಂತವನ್ನು ನಂಬಿ ಅದನ್ನು ಪಾಲಿಸುತ್ತಿರುವ ಇನ್ಸಪೆಕ್ಟರ್ ಪಾಷಾರವರು ಪ್ರತಿ ವರ್ಷ ತಾವು ಯಾವುದೇ ಠಾಣೆಯಲ್ಲಿ ಇದ್ದರೂ ಅಲ್ಲಿ ಗಣೇಶ ಹಬ್ಬದ ದಿನದಂದು ಭಕ್ತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ ಈ ಮೂಲಕ ಧರ್ಮಗಳ ಮಧ್ಯೆ ಇರುವ ಆ ಸಾಮರಸ್ಯವನ್ನು ಸಾರಿ ಸಾರಿ ತಿಳಿಸುತ್ತಿದ್ದಾರೆ.

ಈ ಸಲದ ಹಬ್ಬಕ್ಕೂ ಕೂಡ ಪಾಷಾರವರು ತಾವೇ ಸ್ವತಃ ಹೋಗಿ ಗಣೇಶ ಮೂರ್ತಿಯನ್ನು ತೆಗೆದುಕೊಂಡು ಬಂದು ಪೂಜಿಸಿದರು.