ನವದೆಹಲಿ: ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ 23 ವರ್ಷದ ನೀರಜ್ ಚೋಪ್ರಾ ಪೋಷಕರ ಕನಸನ್ನು ನನಸು ಮಾಡಿದ್ದಾರೆ. ಅವರ ಆಸೆಯಂತೆ ಪೋಷಕರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ತಮ್ಮ ತಂದೆ-ತಾಯಿ ಪುಟ್ಟ ಆಸೆ ಈಡೇರಿಸಿದರ ಸಂತೋಷದ ಬಗ್ಗೆ ನೀರಜ್ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪೋಷಕರ ಜೊತೆ ವಿಮಾನದಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸಹ ಶೇರ್ ಮಾಡಿಕೊಂಡಿದ್ದಾರೆ. ಪೋಷಕರೊಂದಿಗೆ ವಿಮಾನದೊಳಗೆ ಕಾಲಿಡುವ ಮತ್ತು ವಿಮಾನದೊಳಗೆ ಕುಳಿತುಕೊಂಡ ಮೇಲೆ ತೆಗೆದುಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೋಗಳನ್ನು ಶಾಶ್ವತವಾಗಿ ಇರಿಸಿಕೊಳ್ಳಿ, ಯಾವಾಗಲಾದರೂ ನಿಮಗೆ ಉತ್ಸಾಹ ಕುಗ್ಗಿದರೆ, ಬೇಸರವಾದರೆ ಈ ಫೋಟೋಗಳನ್ನು ನೋಡಿ ಆಗ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸ್ಪೂರ್ತಿ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Photo ಮೂಲಕವೇ ಟೀಕಾಕಾರರಿಗೆ ಉತ್ತರ ಕೊಟ್ಟ ಕಾಶೀನಾಥ್ ನಾಯ್ಕ್
A small dream of mine came true today as I was able to take my parents on their first flight.
— Neeraj Chopra (@Neeraj_chopra1) September 11, 2021
आज जिंदगी का एक सपना पूरा हुआ जब अपने मां – पापा को पहली बार फ्लाइट पर बैठा पाया। सभी की दुआ और आशिर्वाद के लिए हमेशा आभारी रहूंगा 🙏🏽 pic.twitter.com/Kmn5iRhvUf