- ವಿಮಾನ ನಿಲ್ದಾಣದಲ್ಲಿ ಎಲ್ಲಿ ನೋಡಿದ್ರೂ ನೀರು
ನವದೆಹಲಿ: ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಅಬ್ಬರದ ಮಳೆಗೆ ಜನತೆ ಬೆಚ್ಚಿಬಿದ್ದಿದ್ದಾರೆ. ಈ ಬಾರಿಯ ಮಾನ್ಸೂನ್ ಮಳೆ 46 ವರ್ಷದ ಬಳಿಕ ದಾಖಲೆಯ ಮಳೆಯಾಗಿದೆ.
ಈವರೆಗೂ ದೆಹಲಿಯಲ್ಲಿ 1,100 ಮಿಲಿ ಮೀಟರ್ ಮಳೆ ದಾಖಲಾಗಿದೆ. 2003ರಲ್ಲಿ 1050 ಮಿಲಿ ಮೀಟರ್ ಮಳೆ ದಾಖಲಾಗಿತ್ತು. 1975ರಲ್ಲಿ 1150 ಮಿಲಿ ಮೀಟರ್ ಮಳೆಯಾಗಿರುವುದು ಈವರೆಗಿನ ದಾಖಲೆಯಾಗಿದೆ. 1975 ಹೊರತುಪಡಿಸಿದರೆ ಈ ಬಾರಿಯ ಮಳೆ ಹೊಸ ದಾಖಲೆ ಸೃಷ್ಟಿಸಿದೆ.
Delhi: Waterlogging at Indira Gandhi International Airport (Terminal 3) after national capital received heavy rain
— ANI (@ANI) September 11, 2021
As per India Meteorological Department (IMD), Delhi will witness 'generally cloudy sky, heavy rain/thundershowers, very heavy rain at isolated places towards night' pic.twitter.com/q36727krfB
ಎಲ್ಲೆಲ್ಲಿ ಮಳೆ?:
(ಬೆಳಗ್ಗೆ 5.30 ರಿಂದ 8.30 ರ ನಡುವೆ)
- ಸಫ್ದರ್ಜಂಗ್ ಹವಾಮಾನ ಕೇಂದ್ರವು 81.3 ಮಿಮೀ ಮಳೆ
- ಪಾಲಂ ವೀಕ್ಷಣಾಲಯದಲ್ಲಿ 98 ಮಿಮೀ ಮಳೆ
ಶುಕ್ರವಾರ ಬೆಳಗ್ಗೆ 8.30 ರಿಂದ ಶನಿವಾರ ಬೆಳಗ್ಗೆ 8.30 ರ ನಡುವೆ
- ಸಫ್ದರ್ಜಂಗ್‍ನಲ್ಲಿ ಒಟ್ಟು 94.7 ಮಿಮೀ
- ಪಾಲಂನಲ್ಲಿ 103.3 ಮಿಮೀ

1975ರಲ್ಲಿ 1150 ಮಿಲಿ ಮೀಟರ್ ಮಳೆಯಾಗಿರುವುದು ಈವರೆಗಿನ ದಾಖಲೆಯಾಗಿದೆ. 1975 ಹೊರತುಪಡಿಸಿದರೆ ಈ ಬಾರಿಯ ಮಳೆ ಹೊಸ ದಾಖಲೆ ಸೃಷ್ಟಿಸಿದೆ. ಸೆಪ್ಟೆಂಬರ್ 12 ರಿಂದ 17 ವರೆಗೂ ದೆಹಲಿಯಲ್ಲಿ ನಿರಂತರ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಇನ್ನೂ ಮಳೆಯಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನದ ಆವರಣ, ರನ್ ವೇ ಸಹ ಮುಳುಗಡೆಯಾಗಿದೆ. ದೆಹಲಿಯ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ರೆ, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಇದನ್ನೂ ಓದಿ: ಸಾಯಿ ಧರಂ ತೇಜ್ ಅಪಫಾತ – ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ