ಬೆಂಗಳೂರು : ಡಿ ಕೆ ಶಿವಕುಮಾರ್‌ರವರು ಇಂದು ತಮ್ಮ ನಿವಾಸದ ಅಡುಗೆ ಕೋಣೆಯಿಂದ ಟ್ವೀಟ್ ಮಾಡುವ ಮೂಲಕ ನಾಡಿನ ಜನತೆಯ ಮುಂದೆ ಪ್ರಶ್ನೆಯೊಂದನ್ನು ಇಟ್ಟಿದ್ದಾರೆ. ಹಾಗಾದರೆ ಆ ಪ್ರಶ್ನೆ ಏನು? ಇಲ್ಲಿದೆ ನೋಡಿ

ಟ್ವೀಟ್ಟರ್‌ನಲ್ಲಿ ಒಂದು ಸಣ್ಣ ವಿಡೀಯೊ ಹಂಚಿಕೊಂಡಿರುವ ಡಿಕೆಶಿಯವರು, ಜನರಿಗೆ ಅಡುಗೆ ಅನಿಲ ಬೆಲೆ ಇಳಿಕೆಯಾಗಬೇಕೆ ಬೇಡವೇ ಎಂದು ಕೇಳಿಕೊಂಡಿದ್ದು ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೆನೆ ಎಂದಿದ್ದಾರೆ.
ಇದನ್ನೂ ಓದಿ : ಬಿಜೆಪಿಗೆ ಗೆಲ್ಲುವ ವಿಶ್ವಾಸ ಇದ್ದರೆ BBMP ಚುನಾವಣೆ ನಡೆಸಲಿ – ಡಿಕೆಶಿ ಸವಾಲು

ಎಲ್ ಪಿ ಜಿ ಸಿಲಿಂಡರ್ ಬೆಲೆ 888 ರೂಪಾಯಿ ಆಗಿದ್ದು ಇನ್ನೇನು 900-1000 ಗಡಿ ದಾಟಲಿದೆ ಈ ಹಿನ್ನೇಲೆಯಲ್ಲಿ ಬೆಲೆ ಇಳಿಕೆ ಜನರಿಗೆ ಬೇಕೆ ಎಂದು ನೇರವಾಗಿ ಪ್ರಶ್ನೆ ಕೇಳಿದ್ದಾರೆ.
Are you ready for this week's question?
— DK Shivakumar (@DKShivakumar) September 11, 2021
ಪ್ರಿಯ ಸ್ನೇಹಿತರೇ, ವಿಶೇಷವಾಗಿ ತಾಯಂದ್ರೇ, ಅಕ್ಕ-ತಂಗಿಯರೇ ಈ ವಾರ ಗಂಭೀರವಾದ ಪ್ರಶ್ನೆಯೊಂದನ್ನ ನಿಮ್ ಮುಂದೆ ಇಡ್ತಿದ್ದೀನಿ. #OnduPrashne pic.twitter.com/yv5IyeD0mq