ಚಿತ್ರದುರ್ಗ : ಚಳ್ಳಕೆರೆ ಗೇಟ್ ಬಳಿ ದಂಪತಿ ಸ್ಕೂಟಿಯಲ್ಲಿ ಪ್ರಯಾಣಿಸುವಾಗಲೇ ಪತಿ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಈ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದು ಪೋಲಿಸರು ಆರೊಪಿಯನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯಿರುವ ಬಡಾ ಮಖಾನ್ ಎಂಬ ಬಡಾವಣೆಯಲ್ಲಿ ವಾಸವಾಗಿದ್ದ ಅಮೀನಾ ಕೊಲೆಗೀಡಾದ ದುರ್ದೈವಿ. ಅಮೀನಾಳ ಪತಿ ಪಾಷ ಕೊಲೆ ಮಾಡಿದ ಆರೋಪಿ. ನಿನ್ನೆ ದರ್ಗಾಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ ಮರಳುವ ವೇಳೆ ಚಲಿಸುತ್ತಿದ್ದ ಸ್ಕೂಟಿಯಲ್ಲೆ ಪಾಷ ತನ್ನ ಪತ್ನಿ ಅಮೀನಾಗೆ ಚಾಕುವಿನಿಂದ ಇರಿದಿದ್ದು ತೀವ್ರ ರಕ್ತ ಸ್ರಾವದಿಂದ ಅಮೀನಾ ಮೃತಪಟ್ಟಿದ್ದಾಳೆ.
ಇದನ್ನೂ ಓದಿ : ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಉತ್ತರಿಸಿದ ನುಸ್ರತ್ ಜಹಾನ್
ಪೋಲಿಸರು ಈ ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿದ್ದು ಮುಂದಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.