ತೀರ್ಥಹಳ್ಳಿ : ದೇಶದಾದ್ಯಂತ ಜನರು ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಸರ್ಕಾರಗಳ ಸಡಿಲಿಕೆಯಾದ ನಿಯಮ ನಿಭಂದನೆಗಳನ್ನು ಕೆಲವರು ಪಾಲಿಸಿದರೆ ಇನ್ನು ಕೆಲವರು ಬಹುತೇಕ ಗಣೇಶ ಹಬ್ಬವನ್ನು ಕೊರೊನ ಇಲ್ಲವೆನೋ ಎಂಬಂತೆ ಸಹಜವಾಗಿ ತಮ್ಮ ಹಬ್ಬದ ಖರೀದಿಗಳನ್ನು ಮಾಡಿಕೊಂಡು ಆಚರಿಸುತ್ತಿದ್ದಾರೆ. ಈ ಮಧ್ಯೆ ಕರ್ನಾಟಕದ ಹೋಂ ಮಿನಿಸ್ಟರ್ ಅರಗ ಜ್ಙಾನೇಂದ್ರರವರು ತಮ್ಮ ಊರಿಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ : ಈ ಬಾರಿಯ ಗಣೇಶ ಹಬ್ಬಕ್ಕೆ ಸಲ್ಮಾನ್ ಖಾನ್ ಗೈರು

ಕರ್ನಾಟಕದ ಗೃಹಮಂತ್ರಿಗಳಾದ ಅರಗ ಜ್ಙಾನೇಂದ್ರರವರು ತಮ್ಮ ಸ್ವಗ್ರಾಮ ತೀರ್ಥಹಳ್ಳಿ ಹತ್ತಿರದ ಗುಡ್ಡೇಕೊಪ್ಪದಲ್ಲಿ ಸಂಕಷ್ಟಹರ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಗೃಹಮಂತ್ರಿಗಳು ಕೆಲ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.

ಟ್ವೀಟ್ ನಲ್ಲಿ ‘ನನ್ನ ಸ್ವಗ್ರಾಮವಾದ ಗುಡ್ಡೇಕೊಪ್ಪದಲ್ಲಿ ನೇತಾಜಿ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿರುವ 45 ನೇ ವರ್ಷದ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು’ ಎಂದು ಬರೆದುಕೊಂಡಿದ್ದಾರೆ.
ನನ್ನ ಸ್ವಗ್ರಾಮವಾದ ಗುಡ್ಡೇಕೊಪ್ಪದಲ್ಲಿ ನೇತಾಜಿ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿರುವ 45 ನೇ ವರ್ಷದ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.. pic.twitter.com/Qmq7RHPKT1
— Araga Jnanendra (@JnanendraAraga) September 10, 2021