ದೆಹಲಿ : ಇಂದು ಮಧ್ಯಾನ ಕುತೂಹಲಕಾರಿ ಟ್ವೀಟ್ ಮಾಡಿ ಎಲ್ಲರಲ್ಲೂ ಒಂದು ಇಂಟರೆಸ್ಟ್ ಹುಟ್ಟುಹಾಕಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆ ಕುತೂಹಲಕ್ಕೆ ಸಂಜೆ 6.40 ಕ್ಕೆ ಮತ್ತೊಂದು ಟ್ವೀಟ್ ಮಾಡುವ ಮೂಲಕ ತೆರೆ ಎಳೆದಿದ್ದಾರೆ.

‘ಐಯ್ ಪ್ರಾಮೀಸ್ ಟು ಡೆಲಿವರ್’ ಎಂದು ಪ್ರಾರಂಭಿಸಿದ ಆ ಟ್ವೀಟ್ ನಲ್ಲಿ ‘ಯಮುನಾ ಕ್ರೀಡಾ ಸಂಕೀರ್ಣದಲ್ಲಿ ವಿಶ್ವ ದರ್ಜೆಯ ಕ್ರೀಡಾಂಗಣ ಸಿದ್ಧವಾಗಿದೆ! ಪೂರ್ವ ದೆಹಲಿ ಕ್ರಿಕೆಟ್ ಲೀಗ್ ಶೀಘ್ರದಲ್ಲೇ ಆರಂಭವಾಗಲಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಎಲ್ಲರ ವಿಘ್ಞ ಕಳೆಯುವ ಗಣೇಶನ ಪೂಜೆಗೆ ವಿಘ್ನವಾಗುತ್ತಿರುವ ಪೋಲಿಸರು