ಚೆನೈ : ಆಧುನಿಕ ಆಟೋಮೊಬೈಲ್‌ನ ಹುಟ್ಟುಹಾಕಿದ ಖ್ಯಾತಿ ಹೊಂದಿದ Automobile ಕ್ಷೇತ್ರದ ದೈತ್ಯ FORD ಭಾರತದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಘೋಷಣೆ ಮಾಡಿದೆ. 1995ರ ಅಕ್ಟೋಬರ್ ನಲ್ಲಿ ಭಾರತದಲ್ಲಿ FORD INDIA PVT LTD ಹೆಸರಲ್ಲಿ ತಮಿಳುನಾಡಿನ ಶೊಲಿಂಗನಲ್ಲೂರು ಎಂಬ ಸ್ಥಳದಲ್ಲಿ ತನ್ನ ಕಾರ್ಯಾರಂಭ ಮಾಡಿದ್ದ ಫೋರ್ಡ ಸಂಸ್ಥೆ ಇವತ್ತಿನ ಈ ಮಟ್ಟಕ್ಕೆ ಭಾರತದ ರಸ್ತೆಗಳಲ್ಲಿ ಹೆಸರು ಮಾಡಲು ಬಹಳ ಕಷ್ಟಪಟ್ಟಿತ್ತು.

ಈಗ ಈ ಸಂಸ್ಥೆ ಭಾರತದಲ್ಲಿನ ತನ್ನ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಈ ಹಿಂದೆ ನಷ್ಟದ ಪರಿಣಾಮ ಜನರಲ್ ಮೋಟಾರ್ಸ್ ಮತ್ತು ಹಾರ್ಲೆ ಡೇವಿಡ್ಸನ್ ನಂತಹ ಅಮೇರಿಕನ್ ಕಂಪನಿಗಳು ಭಾರತದ ಮಾರುಕಟ್ಟೆಯನ್ನು ತೊರೆದಿದ್ದರು. ಫೋರ್ಡ್ ಸಂಸ್ಥೆಯು ಈ ಎರಡು ಸಂಸ್ಥೆಗಳು ಮಾಡಿದ ರೀತಿಯಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತಿಲ್ಲ ಬದಲಾಗಿ ಇದು ತನ್ನ ಗ್ರಾಹಕರಿಗೆ ಸೇವೆ ಒದಗಿಸುವುದನ್ನು ಮತ್ತು ಬಿಡಿಭಾಗಗಳ ಪೂರೈಕೆ ಸೇವೆಯನ್ನು ಮುಂದುವರಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಫಿಗೊ, ಆಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್ ಮತ್ತು ಎಂಡೀವರ್ ನಂತಹ ಪ್ರಸ್ತುತ ಉತ್ಪನ್ನಗಳ ಆಮದಿನ ಮೂಲಕ ಭಾರತದಲ್ಲಿ ಫೋರ್ಡ್ ವಾಹನಗಳು ಖರೀದಿಗೆ ಲಭ್ಯವಿರಲಿದೆ ಎಂದು ಫೋರ್ಡ್ ಇಂಡಿಯಾದ ಅದ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ರವರು ಹೇಳಿದ್ದಾರೆ.
ಇದನ್ನೂ ಓದಿ : ಐಸಿಸಿ ವಿಶ್ವಕಪ್ ಟಿ-20 2021 ಕ್ಕಾಗಿ ಭಾರತ ತಂಡ ಪ್ರಕಟ: ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಟಿ-20 ವಿಶ್ವಕಪ್‌ನಿಂದ ಹೊರಗೆ. ಬಿಸಿಸಿಐ
OLYMPUS DIGITAL CAMERA
ಈ ಹಿಂದೆ ಕಂಪನಿಯು ತಮಿಳುನಾಡು ಮತ್ತು ಗುಜರಾತ್ ಗಳ ಉತ್ಪಾದನಾ ಘಟಕಗಳಲ್ಲಿ ಸುಮಾರು 18 ಸಾವಿರ ಕೋಟಿ ರೂಪಾಯಿಗಳನ್ನ ಹೂಡಿಕೆ ಮಾಡಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಫೋರ್ಡ್ ಮೋಟಾರ್ಸ್ ಸುಮಾರು 14 ಸಾವಿರ ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದ್ದು, ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇನ್ನು ತನ್ನ ಉದ್ಯೋಗಿಗಳನ್ನು ತನ್ನ ಇತರ ಪಾಲುದಾರರೊಂದಿಗೆ ಕೆಲಸ ನಿರ್ವಹಿಸಲು ನೇಮಕ ಮಾಡಲು ನಿರ್ಧರಿಸಿದೆ.