ಕೋಲ್ಕತ್ತಾ: ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಸಂಸದೆ, ನಟಿ ನುಸ್ರತ್ ಜಹಾನ್ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಆಗಸ್ಟ್ 26ರಂದು ಗಂಡು ಮಗವಿಗೆ ನುಸ್ರತ್ ಜನ್ಮ ನೀಡಿದ್ದರು. ತಾಯಿ ಮತ್ತು ಮಗು ಆರೋಗ್ಯವಾಗಿರುವ ವಿಚಾರವನ್ನು ಗೆಳೆಯ ಯಶ್ ದಾಸ್ ಗುಪ್ತಾ ಹೇಳಿದ್ದರು.
ಇನ್‍ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ಮಗುವಿನ ಮುಖ ಯಾವಾಗ ತೋರಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ನುಸ್ರತ್ ಜಹಾನ್, ಈ ಪ್ರಶ್ನೆಯನ್ನು ಮಗುವಿನ ತಂದೆಯನ್ನೇ ಕೇಳಬೇಕು. ಆತ ತನ್ನನ್ನು ನೋಡಲು ಯಾರಿಗೂ ಬಿಡುತ್ತಿಲ್ಲ ಎಂದು ಉತ್ತರಿಸಿದ್ದರು. ಇದೇ ಪ್ರಶ್ನೋತ್ತರ ಮುಂದುವರಿದಾಗ ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಕೇಳಲಾಗಿತ್ತು.

ಮಗುವಿನ ತಂದೆ ಯಾರೆಂದು ತಂದೆಗೆ ಗೊತ್ತಿದೆ. ಸದ್ಯ ಮಗುವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದು, ಸಂತೋಷದಲ್ಲಿದ್ದೇವೆ. ನಾನು ಹಾಗೂ ಯಶ್ ಜೊತೆಯಾಗಿ ಕಾಲ ಕಳೆಯುತ್ತಿದ್ದೇವೆ ಎಂದು ಪರೋಕ್ಷವಾಗಿ ಉತ್ತರಿಸಿದ್ದರು. ಇದನ್ನೂ ಓದಿ: ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿ ವಜಾ

2019ರರಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನ ನುಸ್ರತ್ ಮದುವೆಯಾಗಿದ್ದರು ಕೆಲವೇ ದಿನಗಳಲ್ಲಿ ಇಬ್ಬರ ಸಂಬಂಧ ಬಿರುಕು ಮೂಡಿದ್ದರಿಂದ ಬೇರೆಯಾಗಿದ್ದರು. ನಮ್ಮಿಬ್ಬರ ಮಧ್ಯೆ ಏನೇ ಭಿನ್ನಾಭಿಪ್ರಾಯಗಳಿರಬಹುದು. ತಾಯಿ ಮತ್ತು ಮಗುವಿಗೆ ನನ್ನ ಶುಭ ಹಾರೈಕೆಗಳೆಂದು ನಿಖಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ವಕೀಲರಿಂದ ಸಲಹೆ ಪಡೆದ ಅನುಶ್ರೀ – ತರುಣ್ ಮೇಲೆ ನಿರ್ಧಾರವಾಗುತ್ತಾ ನಟಿ ಭವಿಷ್ಯ?