ಕಾನೂನು ರಚನೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ
ವಾಷಿಂಗ್ಟನ್: ಲೈಂಗಿಕ ಸಂಪರ್ಕ ವೇಳೆ ಸಂಗಾತಿಗೆ ತಿಳಿಯದಂತೆ ಕಾಂಡೋಮ್ ತೆಗೆದು ಸೆಕ್ಸ್ ನಡೆಸಿದ್ರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಈ ಸಂಬಂಧ ವಿಶೇಷ ಕಾನೂನು ಸಿದ್ಧಪಡಿಸಲು ಅಮೆರಿಕ ಮುಂದಾಗಿರುವ ಬಗ್ಗೆ ವರದಿಯಾಗಿದೆ.

ಈ ನೂತನ ಕಾನೂನಿನ ಪ್ರಕಾರ, ಸೆಕ್ಸ್ ವೇಳೆ ಪುರುಷ ಸಂಗಾತಿಯ ಒಪ್ಪಿಗೆಯನ್ನು ಪಡೆದುಕೊಳ್ಳುವುದು ಕಡ್ಡಾಯ. ಸಂಗಾತಿಯ ವಿರೋಧದ ನಡುವೆ ಸುರಕ್ಷ ಕ್ರಮಗಳ ತೆಗೆದುಕೊಳ್ಳುದಿದ್ರೆ ಅಪರಾಧವಾಗಲಿದೆ. ಈ ಸಂಬಂಧ ಮಹಿಳೆ ದೂರು ದಾಖಲಿಸಬಹುದಾಗಿದೆ.

ಒಂದು ವೇಳೆ ಮಹಿಳೆ ದೂರು ದಾಖಲಿಸಿದ್ರೆ ಪುರುಷ ಶಿಕ್ಷೆ ಮತ್ತು ದಂಡ ಪಾವತಿಸಬೇಕಾಗುತ್ತದೆ. ಸಿವಿಲ್ ಕೋಡ್ ಅಡಿ ಸರ್ಕಾರ ಕಾನೂನೂ ರೂಪಿಸಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿವೆ. ಇದನ್ನೂ ಓದಿ: ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಉತ್ತರಿಸಿದ ನುಸ್ರತ್ ಜಹಾನ್

ನ್ಯೂಯಾರ್ಕ್ ಮತ್ತು ವಿಸ್ಕಾನಿಸನ್ ಗಳು ಈ ಪ್ರಸ್ತಾಪವನ್ನು ಸದನದಲ್ಲಿರಿಸಿವೆ. ಈ ಸಂಬಂಧ ಕಾನೂನು ಬೇಕು ಅಥವಾ ಬೇಡದ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕ್ಯಾಲಿಫೋರ್ನಿಯಾದಲ್ಲಿ ಅತಿ ಹೆಚ್ಚು ಜನರು ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ.