ಗುವಾಹಟಿ: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ದೋಣಿಯಲ್ಲಿದ್ದ ಹಲವಾರು ಪ್ರಯಾಣಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು 80ಕ್ಕೂ ಹೆಚ್ಚು ಮಂದಿ ನದಿಯಲ್ಲಿ ನಾಪತ್ತೆಯಾಗಿದ್ದಾರೆ.

ಈಗಾಗಲೇ ರಾಷ್ಟ್ರೀಯ NDRF ತಂಡವು ಹಾಗೂ ರಾಜ್ಯ SDRF ಈ ತಂಡಗಳ ಮೂಲಕ ರಕ್ಷಣಾ ಕಾರ್ಯಾಚರಣೆ ಬ್ರಹ್ಮಪುತ್ರ ನದಿಯಲ್ಲಿ ನಡೆಯುತ್ತಿದ್ದು, ಮುಳುಗಿದ ದೋಣಿ ಜೋರ್ಹತ್ ನಿಮತಿ ಘಾಟ್ ನಿಂದ ಮಜುಲಿ ನದಿ ದ್ವೀಪದ ಕಡೆಗೆ ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದ ಇನ್ನೊಂದು ದೋಣಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ : Nipah virus – ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇತ್ತೀಚಿನ ಮಾಹಿತಿಯ ಪ್ರಕಾರ ದೋಣಿಯಲ್ಲಿ 50 ಜನರು ಪ್ರಯಾಣಿಸುತ್ತಿದ್ದರು ಅದರಲ್ಲಿ 40 ಜನರನ್ನು ರಕ್ಷಿಸಲಾಗಿದೆ. ಈ ಘಟನೆ ನಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಈ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. NDRFನ ಮಹಾ ನಿರ್ದೇಶಕ ಸತ್ಯ ಎನ್ ಪ್ರಧಾನ್ ಅವರು ಎರಡೂ ದೋಣಿಗಳಲ್ಲಿ ಸುಮಾರು 120 ಪ್ರಯಾಣಿಕರಿದ್ದರು ಮತ್ತು ಧೋಣಿ ಘರ್ಷಣೆಯ ನಂತರ ಅವರಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.

ಬುಧವಾರ ಸಂಜೆ 4.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಇದುವರೆಗೆ ಕೇವಲ ಒಂದು ಮೃತದೇಹವನ್ನು ಮಾತ್ರ ಪತ್ತೆ ಮಾಡಲಾಗಿದ್ದು 40ಕ್ಕೂ ಜನರನ್ನು ಜೀವರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.ಜೋರ್ಹತ್ ನಲ್ಲಿ ನಡೆದ ದೋಣಿ ಅಪಘಾತದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಈ ದುರಂತದ ಕುರಿತು ಮಾತುಕತೆ ನಡದಿದೆ. ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮತ್ತು ರಕ್ಷಿಸಿದವರ ಸ್ಥಿತಿಯ ಬಗ್ಗೆ ಅಪ್ಡೇಟ್ ಕೇಂದ್ರ ಗೃಹ ಸಚಿವರು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.