ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ಮುನ್ನಲೆಗೆ ಬಂದಿದ್ದು, ನಟಿ, ನಿರೂಪಕಿ ಅನುಶ್ರೀ ಹೆಸರು ಮತ್ತೆ ಕೇಳಿ ಬರುತ್ತಿದೆ. ಆದ್ರೆ ಯಾರ ಸಂಪರ್ಕಕ್ಕೆ ಸಿಗದ ಅನುಶ್ರೀ ಸದ್ಯ ಮುಂಬೈನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈನಿಂದಲೇ ತಮ್ಮ ವಕೀಲರನ್ನು ಸಂಪರ್ಕಿಸಿರುವ ಅನುಶ್ರೀ ಮುಂದೇನು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ತರುಣ್ ರಾಜ್‍ಗೆ ರಿಲೀಫ್ ಸಿಕ್ಕಿದ್ಯಾಕೆ?
ಕಳೆದ ವರ್ಷ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ರಾಜ್ ಎಂಬವರನ್ನು ಬಂಧಿಸಿದ್ದರು. ಚಾರ್ಜ್ ಶೀಟ್ ನಲ್ಲಿ ಪೊಲೀಸರು ತರುಣ್ ರಾಜ್ ಹೆಸರನ್ನು ಕೈಬಿಟ್ಟಿದ್ದಾರೆ. ಇತ್ತ ಮತ್ತೋರ್ವ ಆರೋಪಿಯಾಗಿರುವ ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಐಡಿ ಪ್ರೆಶ್ ಉತ್ಪನ್ನಗಳಿಗೆ ಮತೀಯ ಬಣ್ಣ – ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಪೋಸ್ಟ್
ಮಂಗಳೂರು ಪೊಲೀಸರು ಅನುಶ್ರೀ ಅವರನ್ನು ಉಳಿಸುವದಕ್ಕಾಗಿಯೇ ತರುಣ್ ರಾಜ್ ಎಂಬಾತನನ್ನು ಪ್ರಕರಣದಿಂದ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಒಂದು ವೇಳೆ ತರುಣ್ ರಾಜ್ ಬಂಧನವಾದ್ರೆ ಅನುಶ್ರೀಗೆ ಕಂಟಕ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಈ ವಿಷಯಗಳ ಕುರಿತು ವಕೀಲರ ಜೊತೆ ಚರ್ಚಿಸಿ ಅನುಶ್ರೀ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.