ಮಂಡ್ಯ : ತನಗೆ ಮದುವೆಯಾಗಿ 11 ವರ್ಷವಾದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ತನ್ನ ತಂದೆ-ತಾಯಿಯಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದ 32 ವಯಸ್ಸಿನ ಯುವಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ : ಹಾರ್ಡವೇರ್ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ
32 ವರ್ಷದ ಗಿರೀಶ್ ಆತ್ಮಹತ್ಯೆ ಮಾಡಿಕೊಂಡ ದುದ್ರೈವಿ. ‘ನನ್ನ ಸಾವಿಗೆ ಅಪ್ಪ ರಾಜು ಮತ್ತು ಅಮ್ಮ ದೇವಮಣಿಯೇ ಕಾರಣ’ ಎಂದು ಸ್ಪಷ್ಟವಾಗಿ ಡೆತ್ ನೋಟ್ ಬರೆದಿಟ್ಟು, ತಮಗೆ ತಂದೆ-ತಾಯಿ ಹೇಗೆ ಕಿರುಕುಳ ನೀಡಿದ್ದರು ಎಂಬುದನ್ನೂ ಸಹ ಡೆತ್ ನೋಟ್ನಲ್ಲಿ ವಿವರಿಸಿದ್ದಾರೆ.
ಗಿರೀಶ್ ರವರ ತಂದೆ ರಾಜು ಮತ್ತು ತಾಯಿ ದೇವಮಣಿ ಇಬ್ಬರು ಶಿಕ್ಷಕರು ಎಂದು ತಿಳಿದುಬಂದಿದೆ. ರಾಜುರವರು ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದ್ದರೆ ಅವರ ಹೆಂಡತಿ ದೇವಮಣಿ ಇನ್ನು ಸಹ ಕೆಲಸ ಮಾಡುತ್ತಿದ್ದರು. ತಮ್ಮ ಮಗ ಗಿರೀಶ್ ಮತ್ತು ಸೊಸೆಗೆ ಮದುವೆಯಾಗಿ 11 ವರ್ಷಗಳು ಕಳೆದಿದ್ದು ಇನ್ನು ಮಕ್ಕಳಾಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಗ ಮತ್ತು ಸೊಸೆಯನ್ನು ಕೊಟ್ಟಿಗೆ ಮನೆಯಲ್ಲಿರಿಸಿದ್ದರು ಎಂದು ವರದಿಯಾಗಿದೆ.