ಕಾಬೂಲ್(ಸೆ.8): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ನೂತನ ಸರ್ಕಾರ ವನ್ನು ರಚನೆ ಮಾಡಿದೆ. ಕಳೆದ ವಾರವೇ ತಾಲಿಬಾನ್ ಸರ್ಕಾರ ರಚನೆ ಮಾಡಬೇಕಿತ್ತು, ಆದರೆ ಎರಡೆರಡು ಬಾರಿ ಸರ್ಕಾರದ ಸಂಪುಟದ ಘೋಷಣೆಯನ್ನು ಮುಂದೂಡಿದ್ದ ತಾಲಿಬಾನ್ ಕೊನೆಗೂ ಅಫ್ಘಾನಿಸ್ತಾನದ ನೂತನ ಪ್ರಧಾನಮಂತ್ರಿಯ ಹೆಸರನ್ನು ಘೋಷಣೆ ಮಾಡಿದೆ. ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅವರನ್ನ ಅಫ್ಘಾನ್ ಪ್ರಧಾನಿಯಾಗಿ ನೇಮಕಮಾಡಲಾಗಿದೆ.
Afghanistan: Mullah Hasan to head Taliban 'caretaker' govt; Baradar named deputy
— ANI Digital (@ani_digital) September 7, 2021
Read @ANI Story | https://t.co/aS4e1QIPFv#Afghanistan #Taliban pic.twitter.com/nYxv2FKWzG
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಿದ್ದು, ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿದಿದ್ದಾನೆ. ಇನ್ನು ಈ ಮಧ್ಯಂತರ ಸರ್ಕಾರದಲ್ಲಿ, ಸಿರಾಜ್ ಹಕ್ಕಾನಿಯನ್ನ ಆಂತರಿಕ ವ್ಯವಹಾರಗಳ ಸಚಿವರನ್ನಾಗಿ ನೇಮಕಮಾಡಲಾಗಿದ್ದು, ಮುಲ್ಲಾ ಯಾಕೂಬ್‌ನನ್ನ ರಕ್ಷಣಾ ಸಚಿವರನ್ನಾಗಿ ಆಯ್ಕೆಮಾಡಲಾಗಿದೆ. ಅಫ್ಘಾನ್ ಸರ್ಕಾರ ಈಗಾಗಲೇ ವಿವಿಧ ರಾಜ್ಯಗಳಿಗೆ ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು, ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳನ್ನು ನೇಮಕ ಮಾಡಿದೆ.