ನವದೆಹಲಿ : ವಿವಾಹವಾಗಿ 8 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡದ ಆಟಗಾರ ಶಿಖರ್ ಧವನ್ ಮತ್ತು ಅವರ ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ ಪಡೆದಿದ್ದಾರೆ. ಆಸ್ಟ್ರೇಲಿಯಾ ಮೂಲದ ಆಯೆಶಾ ಮುಖರ್ಜಿ ಅವರನ್ನು ಶಿಖರ್ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ವಿವಾಹದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿಯೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲಾ. ಇದೀಗ ವಿಚ್ಛೇದನದ ಕುರಿತು ಆಯೆಶಾ ಧವನ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚಿನ ಬೆಳವಣಿಗೆಗಳಿಂದ ಮನನೊಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬರೆದುಕೊಂಡಿದ್ದಾರೆ, ಅಷ್ಟೇ ಅಲ್ಲದೆ ಆಘಾತದಲ್ಲಿ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಇನ್ನು ಆಯೆಶಾ ಅವರಿಗೆ ಇದು ಎರಡನೇ ವಿವಾಹವಾಗಿದ್ದು ಈ ಮೊದಲು ಆಸ್ಟ್ರೇಲಿಯಾ ಮೂಲದ ವ್ಯಾಪಾರಿ ಒಬ್ಬರನ್ನು ಮದುವೆಯಾಗಿದ್ದರು. ಆ ಸಂಬಂಧದಿಂದ ಇಬ್ಬರು ಹೆಣ್ಣು ಮಕ್ಕಳನ್ನೂ ಪಡೆದಿದ್ದ ಆಯೇಷಾ ಬಳಿಕ ಶಿಖರ್ ಧವನ್ ರನ್ನು ಪ್ರೀತಿಸಿ ಮದುವೆಯಾಗಿದ್ದರು, ಶಿಖರ್-ಅಯೇಷಾ ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಶಿಖರ್ ಆ ಇಬ್ಬರು ಮಕ್ಕಳನ್ನು ತಮ್ಮದೇ ಮಕ್ಕಳನ್ನಾಗಿ ಸ್ವೀಕರಿಸಿದ್ದರು, ಧವನ್ ಮತ್ತು ಆಯೆಶಾ ದಂಪತಿಗೆ ಜೊರಾವರ್ ಎಂಬ ಮಗನಿದ್ದಾನೆ..
ಇದನ್ನೂ ಓದಿ : ಡ್ರಗ್ಸ್ ಕೇಸ್ – ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಹೆಸ್ರು – ಕಿಶೋರ್ ಶೆಟ್ಟಿ ಹೇಳಿದ್ದೇನು?
ವಿಚ್ಛೇದನ ಎಂಬುದು ಬಹಳ ಕೆಟ್ಟ ಪದ ಎಂದು ನಾನು ಭಾವಿಸಿದ್ದೆ, ಆದರೆ ನನ್ನ ಜೀವನದಲ್ಲಿ ಎರಡು ಬಾರಿ ವಿಚ್ಛೇದನ ಪಡೆಯುವಂತಾಗಿದೆ. ಈ ಪದಗಳು ಎಷ್ಟು ಬಲಿಷ್ಠವಾಗಿರುತ್ತವೆ ಮತ್ತು ನಮ್ಮ ಜೀವನದ ಭಾಗವಾಗಿರುತ್ತವೆ ಎಂಬುದು ತಮಾಷೆಯೇ ಸರಿ, ಮೊದಲ ಬಾರಿ ವಿಚ್ಛೇದನ ಪಡೆದಾಗ ನಾನು ಬಹಳ ಹೆದರಿದ್ದೆ. ಸೋತ ಅನುಭವವಾಗಿತ್ತು. ನಾನೇನೋ ತಪ್ಪು ಮಾಡಿದ್ದೇನೆ ಎಂದನ್ನಿಸಿತ್ತು. ವಿಚ್ಛೇದನ ನಿಜಕ್ಕೂ ಕೆಟ್ಟ ಪದ, ಎಂದು ಆಯೆಶಾ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಅದರ ಜೊತೆಗೆ ಈಗ ಎರಡನೇ ಬಾರಿ ಇವೆಲ್ಲವನ್ನೂ ಅನುಭವಿಸುವಂತಾಗಿದೆ. ವಾವ್, ಇದು ನಿಜಕ್ಕೂ ಭಯಾನಕ. ಒಮ್ಮೆ ಆಗಲೇ ವಿಚ್ಛೇದನ ಪಡೆದಾಗಿದೆ. ಎರಡನೇ ಬಾರಿ ಮತ್ತಷ್ಟು ಸವಾಲುಗಳಿವೆ ಎಂಬುದು ಗೊತ್ತಿದೆ, ಎರಡನೇ ಮದುವೆ ಮುರಿದು ಬಿದ್ದಾಗಲೂ ಬಹಳ ಭಯವಾಗುತ್ತಿದೆ. ಮೊದಲ ಬಾರಿಯ ವಿಚ್ಛೇದನ ಸಮಯದಲ್ಲಿ ಅನುಭವಿಸಿದ್ದ ಎಲ್ಲಾ ನೋವುಗಳು ಮತ್ತೆ ಆವರಿಸಿದೆ, ಭಯ, ವೈಫಲ್ಯ ಮತ್ತು ನಿರಾಶೆ ನೂರು ಪಟ್ಟು ಎದುರಾಗಿದೆ ಎಂದು ಬರೆದುಕೊಂಡಿದ್ದಾರೆ.
ಕೆಲವೊಮ್ಮೆ ಸಂಬಂಧಗಳು ಅಂತ್ಯ ಕಾಣುತ್ತವೆ. ಅದರಿಂದ ನಾವು ಸಾಕಷ್ಟ ಕಲಿತಿರುತ್ತೇವೆ. ಮುರಿದು ಬಿದ್ದ ಸಂಬಂಧಗಳು ನಮ್ಮನ್ನು ಸ್ಟ್ರಾಂಗ್ ಮಾಡುತ್ತವೆ ಎಂದು ಅಯೇಷಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಡಿವೋರ್ಸ್ ಬಗ್ಗೆ ಬರೆದುಕೊಂಡಿದ್ದಾರೆ.
Shikar dhavan aesha divorce