ಇಂದೋರ್ : ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಶಿವನ ದೇವಾಲಯದಲ್ಲಿ, ಶಿವ ಮತ್ತು ಬಸವನ ಮಧ್ಯ ಪಾದರಕ್ಷೆಗಳನ್ನು ಧರಿಸಿ ನಡೆದುಕೊಂಡು ಹೋಗುತ್ತಿರುವ ತ್ರಿಷಾರವರ ಫೋಟೋ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೈರಲ್ ಆದ ಫೋಟೋವನ್ನು ಆಧರಿಸಿ ಹಲವಾರು ಹಿಂದೂ ಪರ ಸಂಘಟನೆಗಳು ತ್ರಿಷಾರವರ ಈ ನಡವಳಿಕೆಯಿಂದ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಈ ಕುರಿತು ಚಿತ್ರ ನಟಿ ಮತ್ತು ನಿರ್ದೇಶಕರ ವಿರುದ್ದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹೆಸರಾಂತ ಚಿತ್ರ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿರುವ ಪೊನ್ನಿಯಿನ್ ಸೆಲ್ವಮ್ ಸಿನಿಮಾದ ಚಿತ್ರೀಕರಣ ಇತ್ತೀಚಿಗೆ ಇಂದೋರ್ ನಲ್ಲಿ ನಡೆದಿತ್ತು.
ಇದನ್ನೂ ಓದಿ : ಗುಳಿ ಕೆನ್ನೆ ಚೆಲುವೆಗೆ ತಲೈವಿಯ ಗಿಫ್ಟ್
ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುಭಾಷಾ ನಟಿ ತ್ರಿಷಾ ಶಿವನ ದೇವಸ್ಥಾನವೊಂದರಲ್ಲಿ ನಂದಿ ಮತ್ತು ಶಿವನ ಮಧ್ಯದಿಂದ ತಮ್ಮ ಪಾದರಕ್ಷೆಗಳನ್ನು ಧರಿಸಿ ನಡೆದುಕೊಂಡ ಬಂದ ಫೋಟೋವೊಂದನ್ನು ಅಲ್ಲಿಯೇ ಇದ್ದ ಪ್ರೇಕ್ಷಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಇದರಿಂದ ಆಕ್ರೋಶಗೊಂಡಿದ್ದ ಹಿಂದೂ ಸಂಘಟನೆಗಳು ಈ ಫೋಟೋವನ್ನ #ArrestThrisha ಎಂಬ ಹ್ಯಾಶ್ ಟ್ಯಾಗ್ ಬಳಸಿ ವೈರಲ್ ಮಾಡಿದ್ದರು. ಇದೇ ವಿಷಯಕ್ಕೆ ಸಂಭಂಧಿಸಿದಂತೆ ಚಿತ್ರದ ನಿರ್ದೇಶಕ ಮಣಿರತ್ನಂ ಅವರನ್ನು ಸಹ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.