ಡ್ರಗ್ಸ್ ವ್ಯೂಹದಲ್ಲಿ ಸಿಲುಕಿಕೊಳ್ತಾರಾ ಅನುಶ್ರೀ?
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ, ನಟಿ ಅನುಶ್ರೀಗೆ ಡ್ರಗ್ಸ್ ಟೆಸ್ಟ್ / ಹೇರ್ ಫಾಲಿಕ್ ಟೆಸ್ಟ್ ಮಾಡಿಲ್ಲ ಏಕೆ ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಪ್ರಶ್ನೆ ಮಾಡಿದ್ದಾರೆ.
2020ರಲ್ಲಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನದ ಬಳಿಕ ಅನುಶ್ರೀ ಹೆಸರು ಮುನ್ನಲೆಗೆ ಬಂದಿತ್ತು. ನಂತರ ಮಂಗಳೂರು ಸಿಸಿಬಿ ಪೊಲೀಸರು ಅನುಶ್ರೀಗೆ ನೋಟಿಸ್ ನೀಡಿತ್ತು. ತದನಂತರ ಅನುಶ್ರೀ ಸಹ ಮಂಗಳೂರಿಗೆ ತೆರಳಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದರು. ಸೆ.19 2020ರಂದು ಡ್ಯಾನ್ಸರ್ ಕಿಶೋರ್ ಶೆಟ್ಟಿ ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ ಅನುಶ್ರೀ ಹೆಸರು ಹೇಳಿದ್ದ ಎನ್ನಲಾಗಿದೆ.

ಅನುಶ್ರೀ ನನಗೆ ರಿಯಾಲಿಟಿ ಶೋ ಮೂಲಕ ಪರಿಚಯ. ನನಗಿಂತ ಹೆಚ್ಚು ಅನುಶ್ರೀಗೆ ಡ್ರಗ್ಸ್ ಪೆಡ್ಲರ್ ಗಳ ಮಾಹಿತಿ ಗೊತ್ತಿದೆ. ತುಂಬಾ ಸರಳವಾಗಿ ಡ್ರಗ್ಸ್ ತರಸಿಕೊಳ್ಳುತ್ತಿದ್ದರು. ಡ್ಯಾನ್ಸ್ ಶೋ ವೇಳೆ Ecstacy ಮಾತ್ರೆಗಳನ್ನು ಸೇವಿಸಿದ್ದೇವೆ. ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ ಎಂದು ಕಿಶೋರ್ ಶೆಟ್ಟಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಹಾಸ್ಯ ನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರಿಂದ ದಾಳಿ ಆರೋಪ