ಬೆಂಗಳೂರು: ಪೊಲೀಸರು ಮುಂದೆ ನಾನು ನಿರೂಪಕಿ ಅನುಶ್ರೀ ಹೆಸರು ಹೇಳಿಲ್ಲ ಎಂದು ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಕಿಶೋರ್ ಶೆಟ್ಟಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.
ನಾನು ಎರಡೂ ಬಾರಿ ಡ್ರಗ್ಸ್ ಖರೀದಿಸಿ ಸೇವಿಸಿದ್ದೇನೆ. ನನಗಾಗಿ ಖರೀದಿಸಿದ್ದೇನೆಯೇ ಹೊರತು ಬೇರೆಯವರಿಗೆ ಮಾರಾಟ ಮಾಡಲು ಖರೀದಿಸಲು. ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪ್ರತಿ ತಿಂಗಳು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದೇನೆ.

2009ರಲ್ಲಿ ನಾನು ಅನುಶ್ರೀಯವರಿಗೆ ಕೇವಲ ಕೊರಿಯೋಗ್ರಾಫರ್. ನನ್ನ ಈ ಪ್ರಕರಣಕ್ಕೂ ಅನುಶ್ರೀ ಅವರಿಗೆ ಸಂಬಂಧವಿಲ್ಲ. ಅನುಶ್ರೀಗೂ ಡ್ರಗ್ಸ್ ಗೂ ಸಂಬಂಧ ಇಲ್ಲ. ನಾನು ಪೊಲೀಸರ ಮುಂದೆಯೂ ಅನುಶ್ರೀ ಹೆಸರು ಹೇಳಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದು ಸುಳ್ಳು. ಚಾರ್ಜ್ ಶೀಟ್ ಅಂದ್ರೆ ಏನು ಅಂತ ಸಹ ನನಗೆ ಗೊತ್ತಿಲ್ಲ. ನನ್ನ ಬೆಳವಣಿಗೆ ಕಂಡು ಕೆಲವರು ಷಡ್ಯಂತ್ರ ಮಾಡುತ್ತಿರಬಹುದು. ಅವರಿಗೆಲ್ಲ ಒಳ್ಳೆಯದು ಆಗಲಿ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಅನುಶ್ರೀಗೆ ಡ್ರಗ್ಸ್ ಕಂಟಕ -ಮಂಗಳೂರು ಸಿಸಿಬಿ ಪೊಲೀಸರಿಂದ ದೋಷಾರೋಪನೆ ಪಟ್ಟಿ ಸಲ್ಲಿಕೆ

ತರುಣ್ ಎಂಬಾತನ ಮೂಲಕ ನನಗೆ ಅನುಶ್ರೀ ಪರಿಚಯವಾಯ್ತು. ರಿಯಾಲಿಟಿ ಶೋ ಬಳಿಕ ಅನುಶ್ರೀ ಅವರನ್ನು ನಾಲ್ಕೈದು ವರ್ಷದ ಹಿಂದೆ ಭೇಟಿಯಾಗಿದ್ದೆ. ತದನಂತರ ಅವರನ್ನು ಭೇಟಿಯೂ ಆಗಿಲ್ಲ. ತರುಣ್ ಹೆಸರು ಪ್ರಕರಣದಿಂದ ಕೈ ಬಿಟ್ಟಿರುವ ವಿಷಯ ಸಹ ನನಗೆ ಗೊತ್ತಿಲ್ಲ. ಬೆಂಗಳೂರಿನ ಸ್ಯಾಮ್ ಬಳಿ ನನಗೆ ಬೇಕಾದಷ್ಟಯ ಡ್ರಗ್ಸ್ ಖರೀದಿಸಿರೋದು. ಇನ್ನು ಮುಂಬೈನ ಅಂಜಲಿ ನನ್ನ ಫ್ರೆಂಡ್ ಅಷ್ಟೆ ಎಂದು ಹೇಳಿದರು. ಇದನ್ನೂ ಓದಿ: ಅನುಶ್ರೀಗೆ ಡ್ರಗ್ ಟೆಸ್ಟ್ ಮಾಡಿಲ್ಲೇಕೆ? ಇಂದ್ರಜಿತ್ ಲಂಕೇಶ್ ಪ್ರಶ್ನೆ