ರಕ್ತಹೀನತೆ ಮತ್ತು ಸಕ್ಕೆರೆ ಕಾಯಿಲೆ ನಿಯಂತ್ರಣದಲ್ಲಿ ಬೆಂಡೆಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಅದೇ ರೀತಿ ಬೆಂಡೆಕಾಯಿ ಸೇವನೆ ಮಾಡುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚು ಮಾಡುತ್ತದೆ. ಕಣ್ಣಿನ ಆರೋಗ್ಯ, ಮೂಳೆಗಳ ಶಕ್ತಿ ಹೆಚ್ಚಿಸುವುದರಲ್ಲಿ ಉತ್ತಮ ರೀತಿ ಕೆಲಸ ಮಾಡುತ್ತದೆ. ಇಷ್ಟು ಆರೋಗ್ಯ ಲಾಭಗಳು ಇರುವುದರಿಂದಲೇ ಬಹಳಷ್ಟು ಜನ ಬೆಂಡೆಕಾಯಿಯಿಂದ ತಯಾರಿಸಿದ ಅಡುಗೆಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಒಂದೇ ರೀತಿ ಅಲ್ಲದೆ ಸಾಂಬಾರು, ಹುಳಿ, ಪಲ್ಯ, ಈ ತರಹದ ಅನೇಕ ರೀತಿಯ ಬಗೆಗಳನ್ನು ಪ್ರಯೋಗ ಮಾಡುತ್ತಾ, ರುಚಿ ಆಸ್ವಾದಿಸುತ್ತಾರೆ. ಕೆಲವು ಪ್ರಾಂತ್ಯಗಳಲ್ಲಾದರೆ ಬೆಂಡೆಕಾಯಿಯನ್ನು ಹಸಿಯಾಗಿ ಹಾಗೂ ಉಪ್ಪಿನಕಾಯಿ ಹಾಕಿ ತಿನ್ನುತ್ತಾರೆ.

ಬೆಂಡೆಕಾಯಿ ಗರ್ಭಿಣಿಯರ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭಿಣಿಯರು ಬೆಂಡೆಕಾಯಿಯನ್ನು ಸೇವಿಸುವುದರಿಂದ ಹುಟ್ಟುವ ಮಗು ತುಂಬಾನೇ ಚುರುಕಾಗಿರುತ್ತದೆ ಹಾಗೂ ಸೂಸೂತ್ರ ಹೆರಿಗೆ ಆಗುತ್ತೆ ಎಂದು ಹೇಳುತ್ತಾರೆ.
ಹಸಿರು ಬೆಂಡೆಕಾಯಿ ಗೊತ್ತು, ಕೆಂಪು ಬೆಂಡೆಕಾಯಿ ನಿಮಗೆ ಗೊತ್ತಾ, ಉಪಯೋಗವೇನು.?

ಬೆಂಡೆಕಾಯಿಯನ್ನು ಭಾರತ ಸೇರಿದಂತೆ ಪ್ರಪಂಚದ ಸುಮಾರು ಪ್ರದೇಶಗಳಿಗೆ ರವಾನೆ ಮಾಡುತ್ತಾರೆ. ಹಸಿರು ಬಣ್ಣ ರೂಪದಲ್ಲಿರುವ ಬೆಂಡೆಕಾಯಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತೆ, ಆದರೆ ಮಧ್ಯಪ್ರದೇಶಕ್ಕೆ ಸೇರಿದ ಒಬ್ಬ ರೈತ ಕೆಂಪು ಬಣ್ಣದ ಬೆಂಡೆ ಕಾಯಿಯನ್ನು ಬೆಳೆದು ಎಲ್ಲರ ಗಮನವನ್ನು ಸೆಳೆದಿದ್ದಾರೆ. `ಮಿಸ್ರಿಲಾಲ್ ರಜ್‍ಪುತ್’ ಈ ಹೊಸ ತರಹದ ಬೆಳೆಯಿಂದ ಎಲ್ಲರಿಗಿಂತಲು ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ವಾರಣಾಸಿಯ ವ್ಯವಸಾಯ ಯೂನಿರ್ವಸಿಟಿಯಿಂದ ಒಂದು ಕೆ.ಜಿಯ ಕೆಂಪು ಬೆಂಡೆಕಾಯಿ ಬೀಜವನ್ನು ತಂದು 40 ದಿನಗಳಲ್ಲೇ ಕೈಗೆ ಬೆಳೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ಕುರಿತು ಖಾಸಗಿ ಸಂಸ್ಥೆ ಜೊತೆ `ಮಿಸ್ರಿಲಾಲ್ ರಜ್‍ಪುತ್’ ಮಾತನಾಡಿ ಸಮಾನ್ಯವಾಗಿ ಎಲ್ಲರು ಹಸಿರು ಬೆಂಡೆಕಾಯಿ ಬೆಳೆಯುತ್ತಾರೆ ಆದ್ರೆ ಹೊಸ ರೀತಿಯಲ್ಲಿ ಕೆಂಪು ಬೆಂಡೆಕಾಯಿ ಬೆಳೆದಿರುವುದು ಮಾತ್ರ ಹೊಸ ಅನುಭವ ತಂದಿದೆ. ಇದರಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತದೆ, ಬಿಪಿ, ಶುಗರ್, ಕೊಲೆಷ್ಟ್ರಾರಲ್‍ನಿಂದ ಬಳಲುತ್ತಿರುವಂತಹ ವ್ಯಕ್ತಿಗಳಿಗೆ ಹೆಚ್ಚು ಉಪಯುಕ್ತಕಾರಿಯಾಗುತ್ತದೆ. ಜುಲೈ ಮೊದಲನೇ ವಾರದಲ್ಲಿ ಕೆಂಪು ಬೆಂಡೆಕಾಯಿ ಬೀಜಗಳನ್ನು ನಾಟಿದೆ, ಯಾವುದೇ ರೀತಿಯ ಕ್ರಿಮಿನಾಶಕಗಳನ್ನು ಬಳಸದೆ ಇವುಗಳನ್ನು ಬೆಳೆದಿದ್ದೆ ಎಂದು ಹೇಳಿದ್ರು.
ಆದರೆ ಸಾಮಾನ್ಯ ಬೆಂಡೆಕಾಯಿಗಳಿಗಿಂತ ಕೆಂಪು ಬೆಂಡೆಕಾಯಿಯ ಬೆಲೆ ಐದರಿಂದ ಏಳರಷ್ಟು ದುಪ್ಪಟ್ಟಾಗಿದೆ. ಕೆಲವೊಂದು ಸೂಪರ್ ಮಾರ್ಕೆಟ್ ಗಳಲ್ಲಿ ಕೆಂಪು ಬೆಂಡೆಕಾಯಿಯ ಅರ್ಧ ಕೆ.ಜಿ ಕನಿಷ್ಠ 50-60 ರೂ. ಗರಿಷ್ಟ ಬೆಲೆ 300-400 ರೂಪಾಯಿ ಇರುತ್ತದೆ.
ಸಾಧಾರಣಾಗಿ ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳು
*ಬೆಂಡೆಕಾಯಿಯಲ್ಲಿ ವಿಟಮಿನ್-ಎ, ವಿಟಮಿನ್-ಬಿ1, ಬಿ2, ಬಿ3, ಬಿ9, ವಿಟಮಿನ್-ಸಿ, ವಿಟಮಿನ್-ಇ, ವಿಟಮಿನ್-ಕೆ, ಕ್ಯಾಲ್ಷಿಯಂ, ಐರನ್, ಮೆಗ್ನಿಷಿಯಂ