ಸದ್ಯ ಯಾರ ಬಳಿಯೂ ಸಮಯ ಇಲ್ಲ. ಎಷ್ಟೋ ಜನ ಹೋಟೆಲ್ ಊಟಕ್ಕೂ ಹೊಂದಿಕೊಳ್ಳಲಾಗದೇ ಇತ್ತ ಅಡುಗೆ ಮಾಡಿಕೊಳ್ಳಲೂ ಆಗದೇ ಪರದಾಡುತ್ತಿರುತ್ತಾರೆ. ಮನೆಯಲ್ಲಿರೋ ಕೆಲ ಕೆಲವೇ ಸಾಮಾಗ್ರಿ ಬಳಸಿ ರುಚಿ ರುಚಿಯಾದ ಟೊಮಾಟೋ ರಸಂ ಸಿದ್ಧ ಮಾಡಬಹುದು. ಟೊಮಾಟೋ ರಸಂ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು
ಟೊಮಾಟೋ – 2 (ಮಧ್ಯಮ ಗಾತ್ರದ್ದು)
ಸಾಸಿವೆ, ಜೀರಿಗೆ- 1 ಟೀ ಸ್ಪೂನ್
ಕರಿಬೇವು – 4 ರಿಂದ 5 ದಳ
ಅಚ್ಚ ಖಾರದ ಪುಡಿ – 1 ಟೀ ಸ್ಪೂನ್
ಬೆಳ್ಳುಳ್ಳಿ – 5 ರಿಂದ 8 ಎಸಳು
ಕೋತಂಬರಿ ಸೊಪ್ಪು
ಅರಿಶಿನ ಪುಡಿ -ಚಿಟಿಕೆ
ರಸಂ ಪೌಡರ್- 1 ಟೀ ಸ್ಪೂನ್
ಎಣ್ಣೆ- 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ
- ಮೊದಲಿಗೆ ಟೊಮಾಟೋ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಜೊತೆಗೆ ಬೆಳ್ಳುಳ್ಳಿ ಎಸಳು ಬಿಡಿಸಿಕೊಂಡು ಚಿಕ್ಕದಾಗಿ ಜಜ್ಜಿಟ್ಟುಕೊಳ್ಳಿ
- ಸ್ಟೌವ್ ಆನ್ ಮಾಡಿಕೊಂಡು ಪಾತ್ರೆ ಇಟ್ಟು ಅಡುಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
- ಸಾಸಿವೆ ಮತ್ತು ಕರಿಬೇವು ಚಟಪಟ ಅಂತ ಸದ್ದು ಮಾಡುತ್ತಿದ್ದಂತೆ ಬೆಳ್ಳುಳ್ಳಿ ಹಾಕಬೇಕು.
- ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗುವ ಮೊದಲೇ ಟೊಮಾಟೋ ಸೇರಿಸಿ ಬೇಯಿಸಿ.
- ಟೊಮಾಟೋ ಸಾಫ್ಟ್ ಆಗ್ತಿದ್ದಂತೆ ರಸಂ ಪೌಡರ್, ಅಚ್ಚ ಖಾರದ ಪುಡಿ, ಅರಿಶಿನ ಮತ್ತು ಉಪ್ಪು ಹಾಕಿ ಕಲಕಿ, ಒಂದು ಗ್ಲಾಸ್ ನೀರು ಹಾಕಿ, ಜೋರು ಉರಿಯಲ್ಲಿ ಎರಡ್ಮೂರು ನಿಮಿಷ ಕುದಿಸಿದ್ರೆ ರುಚಿಯಾದ ಟೊಮಾಟೋ ರಸಂ ರೆಡಿ. ಕೋತಂಬರಿ ಸೊಪ್ಪು ಇದ್ರೆ ಚಿಕ್ಕದಾಗಿ ಕತ್ತರಿಸಿ ಮೇಲೆ ಹಾಕಿ ಅಲಂಕರಿಸಿ. ಇದನ್ನೂ ಓದಿ: ಗಣೇಶೋತ್ಸವಕ್ಕೆ ಬೆಂಗಳೂರಿನಲ್ಲಿ 3 ದಿನ ಮಾತ್ರ ಅವಕಾಶ – ಕಂಡೀಷನ್ ಅಪ್ಲೈ