ಸಿಡ್ನಿ (ಸೆ.7): ಮನೆಯ ಬಳಿ ಆಟವಾಡುತ್ತಿರುವಾಗ ನಾಪತ್ತೆಯಾಗಿದ್ದ ೩ ವರ್ಷದ ಬಾಲಕ, ಮನೆಯಿಂದ ಸುಮಾರು 470 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಅರಣ್ಯ ಇಲಾಖೆ ಪೊಲೀಸರು ತಿಳಿಸಿದ್ದಾರೆ.
`ಆಟಿಂಸ’ ಸಮಸ್ಯೆ ಹಾಗೂ ಮೂಗನಾಗಿದ್ದ ಆಯಂಟನಿ `ಎಜೆ ಎಲ್ಫಲಕ್’ ಎಂಬ ಬಾಲಕ ಉತ್ತರ ಸಿಡ್ನಿಯ ಪುಟ್ಟಿ ಎಂಬ ಗ್ರಾಮದ ತನ್ನ ಮನೆಯ ಬಳಿಯಿಂದ ನಾಪತ್ತೆಯಾಗಿದ್ದ. ಬಾಲಕನ ಪತ್ತೆಗಾಗಿ ಪೊಲೀಸರು ಹೆಲಿಕಾಪ್ಟರ್ ಮೂಲಕ ಅರಣ್ಯದಲ್ಲಿ ಶೋಧ ಕಾರ್ಯ ಆರಂಭಿಸಿದ್ದರು. ಸೋಮವಾರ ಅರಣ್ಯವೊಂದರಲ್ಲಿ ನೀರು ಕುಡಿಯುತ್ತಿದ್ದವೇಳೆ ಎಲ್ಫಲಕ್ ನನ್ನು ಪತ್ತೆಹಚ್ಚಲಾಗಿದೆ. ಈತ 3 ದಿನದಿಂದ ನೀರು ಕುಡಿದು ಜೀವ ಉಳಿಸಿಕೊಂಡಿದ್ದಾನೆ ಎಂದು ಅರಣ್ಯ ಇಲಾಖೆ ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ಬೆಳ್ಳಿ ಪದಕದೊಂದಿಗೆ ತಾಯ್ನಾಡಿಗೆ ಮರಳಿದ ಕನ್ನಡಿಗ ಸುಹಾಸ್ ಯತಿರಾಜ್ ಗೆ ವೈಭವೋಪೇತವಾಗಿ ಸ್ವಾಗತಿಸಿದ ಭಾರತಿಯರು
A three-year-old child missing on a rural property in the Hunter region since Friday has been located following a large-scale search.https://t.co/VrlVwL4sYW pic.twitter.com/byOXFCiD1j
— NSW Police Force (@nswpolice) September 6, 2021
ಬಾಲಕನ ಆರೋಗ್ಯಸ್ಥಿತಿ ಸ್ಥಿರವಾಗಿದ್ದರೂ ಆತನಿಗೆ ಪ್ರಾಥಮಿಕ ಚಿಕಿತ್ಸೆಯ ಅಗತ್ಯವಿದೆ. ಆದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ