ಮುಂಬೈ: ಸಿದ್ಧಾರ್ಥ್ ಶುಕ್ಲಾ ಹಠಾತ್ ನಿಧನ ಅವರ ಪ್ರೀತಿಪಾತ್ರರ ಹೃದಯವನ್ನು ಸಂಪೂರ್ಣವಾಗಿ ಮುರಿದು ಬಿಟ್ಟಿದೆ. ಕೇವಲ 40 ವರ್ಷದ ಸಿದ್ಧಾರ್ಥ್ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾದರು. ಅಭಿಮಾನಿಗಳು ಈ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಸಿದ್ಧಾರ್ಥ್ ಮತ್ತು ಶಹನಾಜ್ ಗಿಲ್ ಅವರ ಪ್ರೇಮಕಥೆಯ ಚರ್ಚೆಯೂ ಆರಂಭವಾಗಿದೆ.

ಇಬ್ಬರೂ ನಟರು ಬಹಳ ಕಾಲ ಒಟ್ಟಿಗೆ ಇದ್ದರು ಮತ್ತು ಈ ಜೋಡಿಯ ಅಭಿಮಾನಿ ಬಳಗ ಅದ್ಭುತವಾಗಿದೆ. ಶಹನಾಜ್ ಗಿಲ್ ಅವರಿಗೆ ಈ ಸಾವಿನ ಸುದ್ದಿ ತಿಳಿದ ತಕ್ಷಣ ಅವರು ಶೂಟಿಂಗ್ ತೊರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಾವಿನ ಸುದ್ದಿಯಿಂದ ತಮಗೆ ಆಘಾತವಾಗಿದೆ ಎಂದು ಶಹನಾಜ್ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ವರದಿಗಳ ಪ್ರಕಾರ ಸಿದ್ಧಾರ್ಥ್ ರಾತ್ರಿ ಸಮಯದಲ್ಲಿ ಕೆಲವು ಔಷಧಿ ಸೇವಿಸಿ ಮಲಗಿದ್ದನು, ಆದರೆ ಸಿದ್ದಾರ್ಥ ಬೆಳಿಗ್ಗೆ ಏಳಲಿಲ್ಲ. ಇದಾದ ನಂತರ ಆತನನ್ನು ತರಾತುರಿಯಲ್ಲಿ ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಸಿದ್ದಾರ್ಥ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ವೈದ್ಯರ ಪ್ರಕಾರ, ಸಿದ್ಧಾರ್ಥ್ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದರು.

ಸಿದ್ದಾರ್ಥ್ ಅವರ ಹಠಾತ್ ನಿರ್ಗಮನದಿಂದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರೆ, ಹೌದು ‘ಸಿದ್ನಾಜ್’ ಅಭಿಮಾನಿಗಳು ಈಗ ಶೆಹ್ನಾಜ್ ಗಿಲ್ ಬಗ್ಗೆ ಚಿಂತಿತರಾಗಿದ್ದಾರೆ. ಅಭಿಮಾನಿಗಳು ಶಹನಾಜ್‍ಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಾರೆ. ಸಿದ್ನಾಜ್ ಸಿದ್ಧಾರ್ಥ್ ಶುಕ್ಲಾ 2020 ರಲ್ಲಿ ಬಿಗ್‍ಬಾಸ್ 13 ಗೆದ್ದರು. ಶೆಹ್ನಾಜ್ ಗಿಲ್ ಜೊತೆಗಿನ ನಿಕಟ ಬಾಂಧವ್ಯದ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಈ ಜೋಡಿಗಳ ಅಭಿಮಾನಿಗಳು ಈ ಜೋಡಿಯನ್ನು ಪ್ರೀತಿಯಿಂದ ‘ಸಿದ್ನಾಜ್’ ಎಂದು ಕರೆಯುತ್ತಾರೆ. ಸಿದ್ದಾರ್ಥ್ ಸಾವಿನ ನೋವಿನಿಂದ ನೋದಿರುವ ಶಹನಾಜ್ ಅವಳಿಗೆ ಸೋಸಿಯಲ್ ಮೀಡಿಯಾದಲ್ಲಿ ಸಿದ್ನಾಜ್ ಎಂದು ಟ್ರೆಂಡ್ ಮಾಡಿದ್ದಾರೆ.

ಹೌದು ಬಿಗ್ ಬಾಸ್ 13ರ ಬಿಗ್‍ಬಾಸ್ ಮನೆಯಲ್ಲಿ ಸಿದ್ದಾರ್ಥ್ ಮತ್ತು ಶಹನಾಜ್ ಪರಸ್ಪರ ಭೇಟಿಯಾದರು. ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು ಆದರೆ ಸಮಯ ಕಳೆದಂತೆ ಅವರು ಹತ್ತಿರ ಬರಲು ಆರಂಭಿಸಿದರು. ಅದೇ ಸಮಯದಲ್ಲಿ ಅಭಿಮಾನಿಗಳು ಇಬ್ಬರಿಗೂ #Siಜಓಚಿಚಿz ಎಂದು ಹೆಸರಿಟ್ಟರು. ಕಾರ್ಯಕ್ರಮದ ಸಮಯದಲ್ಲಿ ಶಹನಾಜ್ ಸಿದ್ಧಾರ್ಥ್ ಮೇಲಿನ ತನ್ನ ಪ್ರೀತಿಯನ್ನು ಒಪ್ಪಿಕೊಂಡನು ಆದರೆ ಸಿದ್ದಾರ್ಥ್ ಅವಳನ್ನು ಸ್ನೇಹಿತೆ ಎಂದು ಕರೆಯುತ್ತಿದ್ದನು ಆದರೆ ಈ ಜೋಡಿಗಳ ಅಭಿಮಾನಿಗಳಾಸೆಯು ಇವರಿಬ್ಬರೂ ಕೂಡಿರಬೇಕು ಎಂದು ಕಲ್ಪನೆ ಮಾಡಿಕೊಂಡು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಗಳನ್ನು ಟ್ರೆಂಡ್ ಮಾಡಲಾಗತ್ತಿತ್ತು ಇಂದಿಗೂ ಈ ಜೋಡಿಯ ಅಭಿಮಾನಿಗಳು ಈ ಸೋಸಿಯಲ್ ಮೀಡಿಯಾಗಳಲ್ಲಿ ದುಃಖದಿಂದ ಕೂಡಿರುವ ಭಾವನೆಗಳನ್ನು ಶೇರ್ ಮಾಡಲಾಗುತ್ತಿದೆ. ಇದನ್ನೂ ಓದಿ: ನಾವಿಬ್ಬರೂ ಒಂದಾಗಿದ್ದೇವೆ: ಥ್ರಿಲ್ ಹಂಚಿಕೊಂಡ ಡಿಂಪಲ್ ಕ್ವೀನ್