ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಗಳ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಹ್ಲಾದ್ ಜೋಶಿ ಪುತ್ರಿಯ ಅರತಕ್ಷತೆಯ ನೆಪದಲ್ಲಿ ಸಿಎಂ ದೆಹಲಿ ಟೂರ್ ಹೊರಟಿದ್ದು ಬಳಿಕ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ?
ಬೆಳಗ್ಗೆ 11.30ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ತಲುಪಲಿದ್ದಾರೆ.. ಬಳಿಕ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇತರೆ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ಸಂದರ್ಭ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಎಂ ದೆಹಲಿ ಭೇಟಿ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಶುರುವಾಗಿದೆ. ಬಾಕಿ ಉಳಿದಿರುವ ನಾಲ್ಕು ಸ್ಥಾನಗಳ ಭರ್ತಿ ಬಗ್ಗೆ ಸಿಎಂ ಚರ್ಚಿಸ್ತಾರಾ ಎಂಬ ಪ್ರಶ್ನೆ ಚರ್ಚೆಯಾಗ್ತಿದೆ. ಆ ಭೇಟಿ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಟರ ಬಗ್ಗೆ ನಿಲುವೇನು ಅನ್ನೋದ್ರ ಕಂಪ್ಲೀಟ್ ಉತ್ತರ ದೊರಕಲಿದೆ.

ಇನ್ನೂ ಕೆಲ ಸಚಿವರು ತಮ್ಮ ಖಾತೆಗಳ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಹಾಗಾಗಿ ಕೆಲ ಸಚಿವರ ಖಾತೆ ಬದಲಿಸುವ ಹಾಗೂ ನಿಗಮ ಮಂಡಳಿ ಪುನರ್ ನೇಮಕದ ಚರ್ಚೆ ಕೂಡ ಭೇಟಿ ಸಂದರ್ಭ ನಡೆಯವ ಸಾಧ್ಯತೆ ಇದೆ. ಇದನ್ನೂ ಓದಿ: ವಿಕಲಚೇತನ ವ್ಯಕ್ತಿ ಬಲಿ ಪಡೆದ ಬೆಂಗಳೂರಿನ ರಸ್ತೆ ಗುಂಡಿ
ಅಧಿವೇಶನ ಬಳಿಕ ಸಚಿವ ಸಂಪುಟ ವಿಸ್ತರಣೆ?
ಹೈಕಮಾಂಡ್ ಅನುಮತಿ ಕೊಟ್ಟರೇ ಅಧಿವೇಶನ ಬಳಿಕ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಿದೆ. ಖಾಲಿ ಸಚಿವ ಸ್ಥಾನ ಭರ್ತಿ, ಹಾಲಿ ಸಚಿವರ ಖಾತೆ ಬದಲಾವಣೆ ಜೊತೆಗೆ ನಿಗಮ ಮಂಡಳಿ ಪುನರ್ ಆಯ್ಕೆ ವಿಚಾರವಾಗಿ ಸಿಎಂ ಹೈಕಮಾಂಡ್ ಭೇಟಿ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಇದನ್ನೂ ಓದಿ: ಪಾಲಿಕೆ ಸೋಲು, ‘ಕೈ’ ಅಂಗಳ ಕೊತ ಕೊತ – ಟಗರು ವರ್ಸಸ್ ಕನಕಪುರ ಬಂಡೆ!