ಚಿತ್ರದುರ್ಗ (ಸೆ.7): ಉತ್ಸವ ಆಚರಿಸುವಂತೆ ಚಿತ್ರದುರ್ಗ ಜಿಲ್ಲಾ ಜಿಲ್ಲಾಧಿಕಾರಿ ಕವಿತಾ ಮಣ್ಣೀಕೆರಿ ಆದೇಶ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸುವ ಗಣೇಶಗಳು ೪ ಅಡಿ ಹಾಗೂ ಮನೆಗಳಲ್ಲಿ ಕೂರಿಸುವ ಗಣೇಶಗಳು ೨ ಮಾತ್ರ ಇರುವಂತೆ ಸೂಚನೆ ನೀಡಿದ್ದಾರೆ.

ಗಣೇಶ ಕೂರಿಸಿದ ಪ್ರತಿಯೊಂದು ಭೀತಿಯಲ್ಲೂ ಕೋವಿಡ್ ಲಸಿಕಾ ಘಟಕ ಸ್ಥಾಪಿಸಬೇಕು, ಗಣೇಶೋತ್ಸವ ೫ ದಿನಗಳಿಗೆ ಮಾತ್ರ ಸೀಮಿತ ಗೊಳಿಸಲಾಗಿದೆ ಎಂದರು. ಇನ್ನು ಈ ವೇಳೆ ಸಾರ್ವಜನಿಕ ಕಾರ್ಯಕ್ರಮ ಮನೋರಂಜನಾ ಕಾರ್ಯಕ್ರಮ ಮತ್ತು ಗಣೇಶೋತ್ಸವದ ಶುಭಯಾತ್ರೆಯನ್ನು ನಿರ್ಬಂಧಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಕೇವಲ ೪೦ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಿರ್ದಿಷ್ಠ ಪ್ರದೇಶದ ಹೊಂಡಗಳಲ್ಲಿ ಮಾತ್ರ ಗಣೇಶ ವಿಸರ್ಜನೆ ಮಾಡಬೇಕು ಮತ್ತು ಒಂದು ವಾರ್ಡ್‌ಗೆ ಒಂದು ಸಾರ್ವಜನಿಕ ಗಣೇಶ ಮಾತ್ರ ಸ್ಥಾಪಿಸಲು ಅವಕಾಶ ನೀಡಲಾಗಿದೆ ಎಂದರು