ಬೆಂಗಳೂರು: ಕಾಂಗ್ರೆಸ್ ಮತ್ತೊಮ್ಮೆ ಸೋಲಿನ ರುಚಿ ನೋಡಿದೆ. ಅದು ತನ್ನ ತಪ್ಪುಗಳಿಂದಲೇ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಪದೇ ಪದೇ ಕಾಂಗ್ರೆಸ್‍ನಲ್ಲಿರೋ ಎರಡು ಬಣಗಳ ಜಗಜ್ಜಾಹೀರು ಆಗ್ತಿರೋದು. ಈಗ ಆ ಕೊಲ್ಡ್ ವಾರ್ ಕಂಟಿನ್ಯೂ ಆದಂತಿದೆ. ಪಾಲಿಕೆ ಸೋಲಿಗೆ ಕಾರಣಗಳೇನು ಅನ್ನೋದರ ಪಟ್ಟಿ ಮಾಡಿರೋ ಡಿಕೆಶಿ.. ಹೈಕಮಾಂಡ್ ರಿಪೋರ್ಟ್ ಸಲ್ಲಿಸಿದ್ದಾರಂತೆ.. ಹಾಗಾದ್ರೆ ಆ ರಿಪೋರ್ಟಿನಲ್ಲಿ ಏನಿದೆ ಅನ್ನೋದರ ಮಾಹಿತಿ ಇಲ್ಲಿದೆ.

ಪಾಲಿಕೆ ಫಲಿತಾಂಶ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಮೂಲಕ ಲೋಕಲ್ ಫೈಟ್, ಹೊಣೆಗಾರಿಕೆ ರಾಜ್ಯ ಮಟ್ಟಕ್ಕೆ ಶಿಫ್ಟ್ ಆಯ್ತಾ ಅನ್ನೋ ಪ್ರಶ್ನೆ ಎದ್ದಿದೆ. ಜವಾಬ್ದಾರಿ ವಹಿಸಿಕೊಳ್ಳದೆ ತಪ್ಪಿಸಿಕೊಂಡ ನಾಯಕನ ವಿರುದ್ಧ ಹೈಕಮಾಂಡ್‍ಗೆ ದೂರು ಕೊಡಲು ಸಿದ್ಧತೆ ನಡೆಸಿದೆಯಂತೆ. ಹಾಗಾಗಿ ಕೆಪಿಸಿಸಿ ಅಧಕ್ಷ ಚಾರ್ಜಶೀಟ್ ಸಲ್ಲಿಸೋಕೆ ಮುಂದಾಗಿದ್ದಾರಂತೆ. ಕೆಲವೇ ದಿನಗಳಲ್ಲಿ ಹೈ ಅಂಗಳಕ್ಕೆ ಡಿಕೆಶಿ ರೆಡಿ ಮಾಡ್ತಿರೋ ಚಾರ್ಜ್ ಶೀಟ್ ಹೋಗಲಿದೆಯಂತೆ.

ಟಗರು ವಿರುದ್ಧ ಡಿಕೆಶಿ ‘ಚಾರ್ಜ್‍ಶೀಟ್’!!
- ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡ್ರು.. ಚುನಾವಣೆ ಇರುವುದು ಗೊತ್ತಿದ್ದರೂ ಚಿಕಿತ್ಸೆ ಹೆಸರಲ್ಲಿ ಜಿಂದಾಲ್ ಗೆ ದಾಖಲಾದ್ರುಯದಾಖಲಾಗಿದ್ದಾರೆ. ಸಿದ್ದರಾಮಯ್ಯರಂತ ಜವಾಬ್ದಾರಿಯುತ ನಾಯಕ ಉದ್ದೇಶ ಪೂರ್ವಕವಾಗಿ ಅಂತರ ಕಾಯ್ದುಕೊಂಡ್ರು. ಅವರನ್ನ ಬಿಟ್ಟು ನಾನು ಪ್ರಚಾರಕ್ಕೆ ಹೋಗಿದ್ದರೆ ತಪ್ಪು ಸಂದೇಶ ರವಾನೆ ಆಗುತ್ತಿತ್ತು
- ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಮಸ್ಯೆ ಬಗೆಹರಿಸಲು ಸಹಕರಿಸಲಿಲ್ಲ. ಟಿಕೆಟ್ ಹಂಚಿಕೆ ಗೊಂದಲ ಪರಿಹರಿಸಲು ಸ್ಥಳೀಯ ನಾಯಕರಿಗೆ ಬುದ್ಧಿ ಹೇಳಲು ಸಹಕರಿಸಲಿಲ್ಲ. ಯಾವುದೇ ರೀತಿಯ ಸಹಕಾರ ನೀಡದೆ ಚುನಾವವಣೆಯ ಹಿಂದಿನ ದಿನ ಕೇವಲ ಪ್ರೆಸ್ ಮೀಟ್ ನಡೆಸಿ ಕೈ ತೊಳೆದುಕೊಂಡರು. ಇದನ್ನೂ ಓದಿ: ಬಿಜೆಪಿಯಂತೆ ನಮಗೆ ಆರ್ಥಿಕ ಶಕ್ತಿ ಇಲ್ಲದೇ ಇರಬಹುದು: ಡಿ.ಕೆ.ಶಿವಕುಮಾರ್
ಇತ್ತ ಒನ್ ಮ್ಯಾನ್ ಶೋ ರೀತಿಯಲ್ಲಿ ರಾಜ್ಯಪ್ರವಾಸ ಮಾಡ್ತಿರೋ ಡಿಕೆಶಿಗೆ ಸಿದ್ದರಾಮಯ್ಯ ತಮ್ಮ ಮಹತ್ವ ಎಷ್ಟು ಅನ್ನೋದನ್ನ ಈ ರೀತಿ ಪ್ರೂವ್ ಮಾಡಿದ್ರು ಎನ್ನಲಾಗ್ತಿದೆ. ಇದೇ ವಿಷ್ಯವನ್ನ ಹೈಕಮಾಂಡ್ ಮುಂದೆ ಇಡಲು ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದಾರಂತೆ. ಹಾಗಾಗಿ ಇಬ್ಬರ ಜಗಳದಲ್ಲಿ ಲಾಭ ಮಾಡಿಕೊಂಡಿದ್ದು ಮಾತ್ರ ಬಿಜೆಪಿ. ಇದನ್ನೂ ಓದಿ: ಆರ್‌ಎಸ್‌ಎಸ್ ವಿಚಾರ ಬೋಧಿಸುವ ಬಿಜೆಪಿ ನಿರ್ಧಾರಕ್ಕೆ ‘ಕೈ’ ಕಿಡಿ