ಕಾಬೂಲ್(ಸೆ.7): ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ಪರಿಸ್ಥಿತಿ ತುಂಬಾನೆ ಅದಗೆಟ್ಟಿದೆ ಅಂತಾನೆ ಹೇಳಬಹುದು. ದಿನಕ್ಕೊಂದು ನಿಯಮಗಳು ಜಾರಿಯಾಗುತ್ತಿದೆ. ಅದರಲ್ಲು ಅಲ್ಲಿನ ಮಕ್ಕಳ ಹಾಗೂ ಮಹಿಳೆಯರ ಪರಿಸ್ಥಿತಿಯಂತ್ತು ತುಂಬಾನೆ ಹೀನಾಯವಾಗಿದೆ. ಇದರ ಮಧ್ಯೆಯೇ ತಾಲಿಬಾನ್ ಉಗ್ರ ಸಂಘಟನೆ ಮುಖ್ಯಸ್ಥ ಅಬ್ದುಲ್ ಬಖಿ ಹಕ್ಕಾನಿ ಹೊಸ ನಿಯಮವೊಂದು ಜಾರಿತಂದಿದ್ದಾರೆ. ಎಲ್ಲಾ ವಿಶ್ವವಿದ್ಯಾಲಯದಲ್ಲಿ ಹುಡುಗ ಹುಡುಗಿಯರನ್ನು ನೋಡಬಾರದೆಂದು ಕರ್ಟನ್ ಮೂಲಕ ಪ್ರತ್ಯೇಕಿಸಿ ತರಗತಿ ಆರಂಭಿಸುವಂತೆ ಆದೇಶ ಮಾಡಿದ್ದಾರೆ.

ತಾಲಿಬಾನ್ ಉಗ್ರರ ಹೊಸ ನಿಯಮದಲ್ಲಿ ಹುಡುಗಿಯರ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಹುಡುಗರ ಜೊತೆ ಒಂದೇ ತರಗತಿಯಲ್ಲಿ ಅಭ್ಯಾಸ ಮಾಡುವಂತಿಲ್ಲ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಜೊತೆ ಕಾಣಿಸಿಕೊಳ್ಳುವಂತಿಲ್ಲ. ಜೊತೆಯಾಗಿ ಓಡಾಡುವಂತಿಲ್ಲ. ತರಗತಿ ಬಳಿಕ ನೇರವಾಗಿ ಮನೆ ತಲುಪಬೇಕು ಎಂದು ಹಂಗಾಮಿ ಶಿಕ್ಷಣ ಸಚಿವ ಉಗ್ರ ಹಕ್ಕಾನಿ ಹೊಸ ಆದೇಶ ಹೊರಡಿಸಿದ್ದಾರೆ.
First day of Ibn-e- Sina University in Kabul under Taliban.
— مہوش (@_Mehvish__) September 6, 2021
But Dear Talibans please provide them separate campused SEKHO KUCH ISLAMIC SAY 🙂#TalibanTakeover pic.twitter.com/fj8xfmrfxo
ಆಫ್ಘಾನಿಸ್ತಾನದ ಹಲವು ವಿಶ್ವವಿದ್ಯಾಲಯದ ತರಗತಿಗಳು ಆರಂಭಗೊಂಡಿದೆ. ಕೋಣೆಗಳು, ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕರ್ಟನ್ ಹಾಕಲಾಗಿದೆ. ಇನ್ನು ಕೆಲ ಕಾಲೇಜುಗಳಲ್ಲಿ ಹಲಗೆ, ಶೀಟ್‌ಗಳನ್ನು ಅಡ್ಡಲಾಗಿ ಹಾಕಿ ತರಗತಿ ಆರಂಭಿಸಿದೆ.
The beginning of universities under the Government of the Taliban regime in Kabul pic.twitter.com/gChPmr1Ctf
— Nadia Momand (@NadiaMomand) September 6, 2021
ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಹಂಗಾಮಿ ಶಿಕ್ಷಣ ಸಚಿವ ಹಕ್ಕಾನಿ, ಇಸ್ಲಾಂ ನಿಯಮದ ಪ್ರಕಾರ ಹುಡುಗ-ಹುಡುಗಿ ಒಂದೇ ಕೊಠಡಿಯಲ್ಲಿ ಕೂತು ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಇನ್ನುಮುಂದೆ ಕೂಡ ಈ ವಿಚಾರದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಆಫ್ಘಾನಿಸ್ತಾನದ ಎಲ್ಲಾ ವಿಶ್ವವಿದ್ಯಾಲಯಗಳು ಈ ನಿಯಮ ಅನುಸರಿಸಬೇಕು ಎಂದು ಆದೇಶ ಮಾಡಿದ್ದಾರೆ.