ರಾಯಚೂರು: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.

ರಾಯರ ದರ್ಶನ ಬಳಿಕ ಹರಿದರ್ಶಿನಿ ಮ್ಯೂಸಿಯಂಗೆ ಭೇಟಿ ನೀಡಿ ಮಠದ ಆಡಳಿತ ಮಂಡಳಿಯ ಕೆಲಸವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮ್ಯೂಸಿಯಂನ ವಿಶೇಷತೆ ಬಗ್ಗೆ ಸುಧಾಮೂರ್ತಿಗೆ ತಿಳಿಸಿಕೊಟ್ಟರು. ಬಳಿಕ ಶ್ರೀಗಳು ಫಲಪುಷ್ಪ ಮಂತ್ರಾಕ್ಷತೆಯೊಂದಿಗೆ ಆಶಿರ್ವಚನ ನೀಡಿದರು.

ರಾಯರ ಮಠದ ಭಕ್ತರಾಗಿರುವ ನಾರಾಯಣ ಮೂರ್ತಿ ಸುಧಾಮೂರ್ತಿ ದಂಪತಿ ಮಠಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗೆ ನಡೆದ ರಾಯರ 350ನೇ ಆರಾಧನಾ ಮಹೋತ್ಸವ ನಿಮಿತ್ತ ರಾಯರ ಮಠಕ್ಕೆ ಒಂದು ಲಾರಿಯಷ್ಟು ದಿನಸಿ ಪದಾರ್ಥಗಳನ್ನು ಕಾಣಿಕೆಯಾಗಿ ನೀಡಿದ್ದರು. ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ದಿನಸಿ ನೀಡಿದ್ದರು. ಕೊರೊನಾ ಹಿನ್ನೆಲೆ ಆರಾಧಾನ ಮಹೋತ್ಸವ ಸರಳವಾಗಿ ಜರುಗಿತ್ತು. ಇದನ್ನೂ ಓದಿ: ಸಿಎಂ ಯೋಗಿ ಟೀಕಿಸಿದ್ದ ಮಾಜಿ ಗವರ್ನರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು