ನವ ದೆಹಲಿ : ಟೋಕಿಯೊದಲ್ಲಿ ನಡೆದ ಪ್ಯಾರಾ ಒಲಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್4 ನಲ್ಲಿ ಬೆಳ್ಳಿ ಪದಕ ಬಾಚಿಕೊಂಡಿರುವ ಸುಹಾಸ್ ಯತಿರಾಜ್ ತಾಯ್ನಾಡಿಗೆ ಮರಳಿದ್ದಾರೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೆಹಲಿಗೆ ಇಂದು ಮರಳಿದ್ದಾರೆ.

ಇನ್ನೂ ಪ್ಯಾರಾಲಂಪಿಕ್ ನಲ್ಲಿ ಬೆಳ್ಳಿ ಗೆದ್ದಿರೋ ಕನ್ನಡದ ಸುಹಾಸ್ ಯತಿರಾಜ್ ಅವರನ್ನು ವಿಮಾನ ನಿಲ್ದಾಣದಲ್ಲಿ ಗ್ರ್ಯಾಂಡ್ ವೆಲ್ಕಮ್ ಮಾಡಲಾಯ್ತು.. ಆ ಬಳಿಕ ತೆರೆದ ಜೀಪ್ ನಲ್ಲಿ ವಿಮಾನ ನಿಲ್ದಾಣದಿಂದ ಮನೆಯವರೆಗೂ ಮೆರವಣಿಗೆ ಮಾಡಿ ಪಟಾಕಿ ಹೊಡೆದು ಸಂಭ್ರಮಿಸಲಾಯ್ತು.
ಇದನ್ನೂ ಓದಿ : ಮೋದಿ ಇದ್ದಿದ್ದಕ್ಕೆ ಪೆಟ್ರೋಲ್ ಬೆಲೆ ಇಷ್ಟಿದೆ, ಬೇರೆಯವರು ಆಗಿದ್ರೆ 200 ರೂ. ಇರ್ತಿತ್ತು: ನಿರಾಣಿ
ಇನ್ನೂ ಇದೇ ಸಂದರ್ಭ ಪದಕ ವಿಜೇತ, ಕನ್ನಡಿಗ ಸುಹಾಸ್ ಯತಿರಾಜ್ ತಮ್ಮ ಸಂತೋಷವನ್ನು ಹಂಚಿಕೊಂಡರು.. ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಸಂಭ್ರಮ ಹೇಳಿಕೊಂಡ್ರು.. ಚಿನ್ನ ಗೆಲ್ಲುವ ಗುರಿ ಇತ್ತು..ಆದ್ರೆ ಬೆಳ್ಳಿ ಪದಕ ಬಾಚಿದ್ದೇನೆ ಎಂದರು.. ಇದೇ ಸಂದರ್ಭ ಕನ್ನಡಿಗರು, ಕರ್ನಾಟಕದರನ್ನು ನೆನೆಪಿಸಿಕೊಂಡ ಸುಹಾಸ್ ಯತಿರಾಜ್ ಕೃತಜ್ಞತೆ ತಿಳಿಸಿದ್ರು.. ಕನ್ನಡಿಗರಿಗೆ ನಾನು ಚಿರಋಣಿ ಆದಷ್ಟು ಬೇಗ ಕರ್ನಾಟಕಕ್ಕೆ ಬರೋದಾಗಿ ಹೇಳಿದ್ರು.
Subhash yatiraj Tokyo pharalympics kannadiga IAS officer