ಕೊಪ್ಪಳ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿಂಪ್ಲಿಸಿಟಿ ಬಗ್ಗೆ ನಮಗೆಲ್ಲ ಗೊತ್ತೆ ಇದೆ.. ಮತ್ತೊಮ್ಮೆ ಅವರು ಸರಳತೆ ಮೆರೆದಿದ್ದು ಜನಸಾಮಾನ್ಯರಂತೆ ಕುಳಿತು ಊಟ ಮಾಡ್ತಿರೋ ಫೊಟೋ ಈಗ ಮತ್ತೊಂದು ಸರಳತನಕ್ಕೆ ಕೈಗನ್ನಡಿಯಾಗಿದೆ.

ಹೌದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಪೋಟೋಗಳದ್ದೇ ಹವಾ, ಫಾನ್ಸ್ ಗಳ ಹೃದಯ ಗೆದ್ದಿರೋ ಪೋಟೋಗಳು ಸಕತ್ ವೈರಲ್ ಆಗಿವೆ. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಮಾನ್ಯರಂತೆ ಜಮೀನಿನಲ್ಲಿ ಊಟ ಮಾಡೋ ಫೋಟೋಗಳು ಇವಾಗಿವೆ. ಅದರಲ್ಲೂ ಕುರಿಗಾರರು ಹಾಕಿರುವ ಹಟ್ಟಿಯಲ್ಲಿ ಕುಳಿತು ಊಟ ಮಾಡುತ್ತಿರುವ ಫೋಟೋಗಳಾಗಿದ್ದು ಅಪ್ಪು ಸರಳತೆಗೆ ಅಭಿಮಾನಿಗಳು ವಾವ್ ಎಂದಿದ್ದಾರೆ.
ಇದನ್ನೂ ಓದಿ : ರಾಯರ ದರ್ಶನ ಪಡೆದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ
ಭಾನುವಾರ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜಕುಮಾರ ಆಗಮಿಸಿದ್ದರು. ಆದರೆ ಕೋವಿಡ್ ಹಿನ್ನೆಲೆ ದರ್ಶನಕ್ಕೆ ನಿಷೇಧ ಇರುವುದರಿಂದ ಗಂಗಾವತಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪುರ, ಬಂಡಿ ಹರ್ಲಾಪುರ, ನಾರಾಯಣ ಪೇಟೆ ಊರುಗಳಿಗೆ ಭೇಟಿ ನೀಡಿದ್ದಾರೆ.
ಗಂಗಾವತಿ ಬಳಿ ಸುತ್ತಾಟ ನಡೆಸಿ ವಿಜಯನಗರಕ್ಕೆ ಹೋಗುವ ವೇಳೆ ದಾರಿಯ ಮಧ್ಯೆ ಕುರಿಗಾರರು ಹಾಕಿರುವ ಕುರಿ ಹಟ್ಟಿಗೆ ಭೇಟಿ ನೀಡಿದ್ದಾರೆ. ಆ ಸಂದರ್ಭ ಕುರಿಗಾರರ ಜೊತೆ ಮಾತುಕತೆ ನಡೆಸಿದ್ದಾರೆ.. ಅಷ್ಟೇ ಅಲ್ಲದೇ ಪುನೀತ್ ರಾಜ್ ಕುಮಾರ್ ಕಂಬಳಿ ಮೇಲೆ ಕುಳಿತು, ಕುರಿಗಾರರ ಜೊತೆ ಸಂಗಟಿ, ಹಾಲು ಊಟ ಮಾಡಿ ಸರಳತೆಯನ್ನು ಮೆರೆದಿದ್ದಾರೆ.

ನಂತರ ಕುರಿಗಾರರ ಮಕ್ಕಳ ಹಾಗೂ ಕುರಿಗಾರರ ಜೊತೆಗೆ ತಮ್ಮ ಕಾರಿನ ಮುಂದೆ ನಿಂತುಕೊಂಡು ಫೋಟೊ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಪ್ಪು ಅವರ ಸರಳತೆಯ ಫೋಟೋಗಳು ಅಭಿಮಾನಿಗಳ ಹೃದಯ ಗೆದ್ದಿದ್ದು, ಫಾನ್ಸ್ ಗಳು ಸಿಂಪಲ್ ಆಗಿ ವಾವ್ ಅಂತಿದಾರೆ.
Appu Puneeth Rajkumar visit Koppala Karnataka simplicity
ಐದು ರೂಪಾಯಿ ನಾಣ್ಯ ನುಂಗಿ ಮಗು ಸಾವುhttps://t.co/pr6NLZAsUO
— Secular TV (@SecularTVKannad) September 6, 2021
join our grouphttps://t.co/MTp9Bj0UFK#mysuru #rupeescoin #Kannada #KannadaNews #kannadahot #kannadalatestnews #seculartv #seculartvnews #seculardigital