ಮೋದಿ ಸರ್ಕಾರ ಜನತೆ ಜೊತೆಯಲ್ಲಿದೆ
ಬೆಂಗಳೂರು: ಮೋದಿ ಇರೋದಕ್ಕೆ ದೇಶದಲ್ಲಿ ತೈಲ ಬೆಲೆ ಇಷ್ಟಿದೆ. ಒಂದು ವೇಳೆ ಬೇರೆಯವರು ಆ ಸ್ಥಾನದಲ್ಲಿದ್ರೆ ಪೆಟ್ರೋಲ್ ಬೆಲೆ 200 ರೂ. ಆಗಿರುತ್ತಿತ್ತು ಎಂದು ಸಚಿವ ಮುರುಗೇಶ್ ನಿರಾಣಿ ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸರ್ಕಾರದ ಸಾಧನೆ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ನಾವೇ ಅಧಿಕಾರ ಹಿಡಿಯೋದು ಖಚಿತ. ಕಳೆದ ಚುನಾವಣೆಗಿಂತ ಕಲಬುರಗಿಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿದೆ. ಮುಂಬರುವ ಎರಡೂ ಬೈ ಎಲೆಕ್ಷನ್ ಗಳನ್ನು ನಾವೇ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.

ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಬೇಕು ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ನಾಯಕ. ಆದ್ರೆ ಹಿರಿಯರಾದ ಯಡಿಯೂರಪ್ಪನವರ ಮಾರ್ಗದರ್ಶನ ಸಹ ಬೇಕು. ಪಾಲಿಕೆ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಇಬ್ಬರು ಪ್ರಚಾರ ಮಾಡಿಲ್ಲ ಎಂದು ತಿಳಿಸಿದರು.