ಬೆಂಗಳೂರು: ಕೋವಿಡ್ ಅಲೆ ಎದುರಿಸಲು ಕೇರಳ ಹೆಣಗಾಡುತ್ತಿದೆ. ದೇಶದಲ್ಲಿ ಪ್ರತಿನಿತ್ಯ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಕೇರಳ ಒಂದರಲ್ಲಿಯೇ ಕಂಡು ಬರ್ತಿವೆ. ಅದ್ರೆಲ್ಲದ್ರ ಮಧ್ಯೆ ಕೇರಳಕ್ಕೆ ಈಗ ನಿಫಾ ವೈರಸ್ ಭೀತಿ ಎದುರಾಗಿದೆ.
ಹೌದು ಕೇರಳದಲ್ಲಿ ನಿಪಾ ವೈರಸ್ ಭೀತಿ ಶುರುವಾಗಿದೆ. ಭಾನುವಾರ 12 ವರ್ಷದ ಬಾಲಕನೊಬ್ಬ ನಿಫಾ ವೈರಸ್ ಸೋಂಕಿಗೆ ಬಲಿಯಾಗಿದ್ದಾನೆ. ಆ ಬಾಲಕನಿಗೆ ಚಿಕಿತ್ಸೆ ನೀಡಿದ್ದ ಇಬ್ಬರು ವೈದ್ಯರಿಗೂ ಸೋಂಕು ತಾಗಿರುವುದು ದೃಢಪಟ್ಟಿದೆ. ಹೀಗಾಗಿ ಕೇರಳದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಸೋಂಕು ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಕೂಡ ಸಾಂಕ್ರಾಮಿಕ ರೋಗ ತಜ್ಞರ ತಂಡವೊಂದನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ.

ಇನ್ನೂ ಕಳೆದ 12 ದಿನದಲ್ಲಿ ಬಾಲಕನ ಸಂಪರ್ಕಕ್ಕೆ ಬಂದಿದ್ದ 188 ಜನರನ್ನು ಗುರುತಿಸಲಾಗಿದೆ. ಈ ಪೈಕಿ ಹೆಚ್ಚು ಅಪಾಯದ ಭೀತಿಯಲ್ಲಿರುವ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯಕ್ಕೂ ನಿಫಾ ಭೀತಿ
ಕರ್ನಾಟಕಕ್ಕೂ ನಿಫಾ ಭೀತಿ ಈಗ ಎದುರಾಗಿದೆ. ಕರ್ನಾಟಕ ಕೇರಳ ರಾಜ್ಯದ ಗಡಿ ಭಾಗದಲ್ಲೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಪಾಸಿಟಿವ್ ಕೇಸ್ ಗಳ ಸಂಖ್ಯೆ ಕೇರಳದಲ್ಲಿ ಏರಿಕೆಯಾಗ್ತಿದ್ದ ಹಾಗೇ ರಾಜ್ಯದಲ್ಲೂ ಏರಿಕೆಯಾಗಿತ್ತು. ಯಾಕಂದ್ರೆ ಸಾವಿರಾರು ಜನ್ರು ಪ್ರತಿನಿತ್ಯ ಕೇರಳ ಕರ್ನಾಟಕಕ್ಕೆ ಸಂಚರಿಸ್ತಾ ಇರ್ತಾರೆ. ಈಗ ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರೋದು ರಾಜ್ಯದ ಆತಂಕಕ್ಕೂ ಕಾರಣವಾಗಿದೆ.

ಕೇರಳದಲ್ಲಿ ಮೃತಪಟ್ಟ ಬಾಲಕನ ವಿವಿರ
ಕಲ್ಲಿಕೋಟೆ ಜಿಲ್ಲೆಯ 12 ವರ್ಷದ ಬಾಲಕನಿಗೆ ಕಳೆದ 4 ದಿನಗಳಿಂದ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಆತನನ್ನು ಒಮಸ್ಸೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಆತನನ್ನು ಶನಿವಾರ ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ರಕ್ತವನ್ನು ಪುಣೆಯ ವೈರಾಣು ಕೇಂದ್ರಕ್ಕೆ ರವಾನಿಸಲಾಗಿತ್ತು. ಆ ರಿಪೋರ್ಟ್ ನಲ್ಲಿ ಆತನಿಗೆ ನಿಫಾ ವೈರಸ್ ತಗುಲಿರೋದು ಶನಿವಾರ ರಾತ್ರಿ ದೃಢಪಟ್ಟಿದೆ.
ತಕ್ಷಣವೇ ತಜ್ಞ ವೈದ್ಯರ ತಂಡ ಬಾಲಕನಿಗೆ ಚಿಕಿತ್ಸೆ ಆರಂಭ ಮಾಡಿದೆ. ಆದ್ರೂ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾನೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿಯೇ ಪಿಪಿಇ ಕಿಟ್ ತೊಟ್ಟು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬಾಲಕನ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ವೇಳೆ ಕುಟುಂಬದ ಕೆಲ ಸದಸ್ಯರಿಗೆ ಮಾತ್ರವೇ ಸ್ಥಳಕ್ಕೆ ಆಗಮಿಸಲು ಅವಕಾಶ ನೀಡಲಾಗಿತ್ತು. ಇನ್ನೂ ಸೋಂಕು ಹರಡದಂತ ತಡೆಯಲು ಬಾಲಕನ ಮನೆಯ ಸುತ್ತಲಿನ 3 ಕಿ.ಮೀ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಬಾಲಕನ ಸಂಪರ್ಕಕ್ಕೆ ಬಂದವರಲ್ಲಿ ತೀವ್ರ ಜ್ವರ, ವಾಂತಿ ಮತ್ತು ಇತರೆ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡುವಂತೆ ಅಲ್ಲಿನ ಸರ್ಕಾರ ಸೂಚಿಸಿದೆ.

ನಿಫಾ ವೈರಸ್ ಹಿನ್ನಲೆ
ನಿಪಾ ವೈರಸ್ 1999ರಲ್ಲಿ ಮೊದಲ ಬಾರಿಗೆ ಮಲೇಷಿಯಾದಲ್ಲಿ ಕಾಣಿಸಿಕೊಂಡಿತ್ತು. ಆಗ 60 ಮಂದಿ ಸಾವನ್ನಪ್ಪಿದ್ದರು. ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು 2001ರಲ್ಲಿ ಬಂಗ್ಲಾದಲ್ಲಿ 45 ಮಂದಿ ಮೃತಪಟ್ಟಿದ್ದರು. 2018ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಕಲ್ಲಿಕೋಟೆಯಲ್ಲೇ ನಿಫಾ ವೈರಸ್ ಕಾಣಿಸಿಕೊಂಡಿತ್ತು. 17 ಜನ ಸಾವನ್ನಪ್ಪಿದ್ದರು. 2019ರಲ್ಲಿ ಕೊಚ್ಚಿ, ಎರ್ನಾಕುಲಂನಲ್ಲೂ ಸೋಂಕು ಪತ್ತೆಯಾಗಿತ್ತು.
ನಿಫಾ ವೈರಸ್
ಇದೊಂದು ಪ್ರಾಣಿಗಳಿಂದ ಮಾನವರಿಗೆ ಹಬ್ಬುವ ವೈರಸ್. ಬಾವಲಿ ಗಳಿಂದ ಮಾನವರಿಗೆ ಸೋಂಕು ಹಬ್ಬುತ್ತದೆ. ಸೋಂಕಿಗೆ ತುತ್ತಾದ ಬಾವಲಿಗಳು ತಿಂದು ಹಾಕಿದ ಹಣ್ಣನ್ನು ಅನ್ಯರು ಸೇವಿಸಿದಾಗ ಸೋಂಕು ಹರಡುತ್ತದೆ. ಹೀಗೆ ಒಬ್ಬ ಮನುಷ್ಯನಿಗೆ ಸೋಂಕು ಕಾಣಿಸಿಕೊಂಡರೆ ಅವರಿಂದ ಇನ್ನೊಬ್ಬರಿಗೆ ಜೊಲ್ಲು, ಉಗುಳಿನ ಮೂಲಕ ಪ್ರಸರಣವಾಗುತ್ತದೆ.

ನಿಫಾ ವೈರಸ್ ಲಕ್ಷಣಗಳು
ಮೆದುಳು ಜ್ವರ, ನಿರಂತರ ಕಫದ ಜೊತೆಗೆ ಜ್ವರ, ಉಸಿರಾಡಲು ಕಷ್ಟ. ತೀವ್ರ ಉಸಿರಾಟದ ತೊಂದರೆ, ತಲೆ ನೋವು, ಮೈಕೈ ನೋವು, ವಾಂತಿ, ಗಂಟಲು ಉರಿತ, ಮಂಪರು- ಇವು ಲಕ್ಷಣಗಳು. ನಿಫಾ ವೈರಸ್ ಮರಣ ದರ ಶೇ.40-80%. ಆರ್‍ಟಿಪಿಸಿಆರ್ ಪರೀಕ್ಷೆ ಮೂಲಕ ರೋಗ ಪತ್ತೆ ಮಾಡಬಹುದು. ಸಾಮಾನ್ಯವಾಗಿ 5-14 ದಿನಗಳ ಕಾಲ ಮನುಷ್ಯರ ದೇಹದಲ್ಲಿ ಸೋಂಕು ಇರುತ್ತದೆ. ಶೀಘ್ರ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ಅಪಾಯ ಇಲ್ಲ. ಇಲ್ಲದೇ ಹೋದಲ್ಲಿ ಸಾವಿನ ಸಾಧ್ಯತೆ ಇರುತ್ತದೆ. ಇದನ್ನೂ ಓದಿ: ಭಾರತದ ಆತ್ಮಹತ್ಯಾ ರಾಷ್ಟ್ರೀಯ ದುರಂತಕ್ಕೆ ಪ್ರಧಾನಿ ಮೋದಿಯೇ ಕಾರಣ: ದಿ ಲ್ಯಾನ್ಸೆಟ್
ಜ್ವರ, ಉಸಿರಾಟ ಸಮಸ್ಯೆ, ತಲೆನೋವು, ಮೈಕೈ ನೋವು, ವಾಂತಿ, ಗಂಟಲು ಉರಿ, ಮಂಪರು. ಆರ್ ಟಿಪಿಸಿಆರ್ ಟೆಸ್ಟ್ ಮೂಲಕ ಸೋಂಕು ಪತ್ತೆ ಹಚ್ಚಬಹುದು. ಶೀಘ್ರ ಚಿಕಿತ್ಸೆ ನೀಡಿದರೆ ಅಪಾಯವಿಲ್ಲ. ಇದನ್ನೂ ಓದಿ: ಲಿಂಗ ಬದಲಾವಣೆಗೆ ಹಣ ನೀಡದ್ದಕ್ಕೆ ಅಪ್ಪ, ಅಮ್ಮ, ಸೋದರಿಯನ್ನ ಕೊಂದ