ಬೆಂಗಳೂರು: ಹುಬ್ಬಳ್ಳಿ ಮತ್ತು ಧಾರವಾಡ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಮೊದಲ ಬಾರಿಗೆ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ನಾಯಕರೊಬ್ಬರು ಮೇಯರ್ ಪಟ್ಟ ಅಲಂಕರಿಸಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 39, ಕಾಂಗ್ರೆಸ್ 33, ಜೆಡಿಎಸ್ 1 ಹಾಗೂ ಇತರರು 9 ವಾರ್ಡ್ ಗಳಲ್ಲಿ ಗೆಲುವು ಕಂಡಿದ್ದಾರೆ. ಅದೇ ರೀತಿ ಬೆಳಗಾವಿಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬೆಳಗಾವಿಯಲ್ಲಿ ಬಿಜೆಪಿ 36, ಕಾಂಗ್ರೆಸ್ 9, ಜೆಡಿಎಸ್ 3 ಮತ್ತು ಇತರರು 13ರಲ್ಲಿ ಗೆಲುವು ದಾಖಲಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅರಳಿದ ಕಮಲ.#ಜನಾಶೀರ್ವಾದ pic.twitter.com/vVAbdA16gD
— BJP Karnataka (@BJP4Karnataka) September 6, 2021
ಇನ್ನೂ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬೆಳಗಾವಿಯಲ್ಲಿ ನಾವು ಸಮರ್ಥ ಅಭ್ಯರ್ಥಿಯನ್ನ ಹಾಕಿರಲಿಲ್ಲ. ಸ್ಥಳೀಯ ಚುನಾವಣೆ ಸ್ಥಳೀಯ ವಿಚಾರಗಳ ಮಹತ್ವದ ಮೇಲಿರುತ್ತದೆ. ಸಾಕಷ್ಟು ಕಡೆ ನಮ್ಮ ಪಕ್ಷದ ಬಂಡಾಯ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಆದರೂ ಫಲಿತಾಂಶ ಸಮಾಧಾನ ತಂದಿದೆ ಎಂದು ಹೇಳಿದರು. ಇದನ್ನೂ ಓದಿ: ರಾಯರ ದರ್ಶನ ಪಡೆದ ಸುಧಾಮೂರ್ತಿ