ತಾಲಿಬಾನ್ ಈಗಾಗಲೇ ತನ್ನ ಸರ್ಕಾರವನ್ನು ರಚಿಸಲು ತಯಾರಿ ನಡೆಸಿದ್ದು ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಸದ್ಯದಲ್ಲೆ ಕಾಬೂಲ್‌ನಲ್ಲಿ ಒಂದು ದೊಡ್ಡ ಮಟ್ಟದ ಸಭೆ ಏರ್ಪಡಿಸುವ ಸಾಧ್ಯತೆಯಿದ್ದು ತಾಲಿಬಾನ್ ಈ ಸಭೆಗೆ ಅಮೆರಿಕಾದ ಹಲವು ಬದ್ಧವೈರಿ ರಾಷ್ಟ್ರಗಳನ್ನು ಆಹ್ವಾನಿಸಿದೆ.

ಅಫ್ಘಾನಿಸ್ತಾನಲ್ಲಿ ಸರ್ಕಾರ ರಚಿಸುವ ಕುರಿತಾದ ಈ ಸಭೆಯಲ್ಲಿ ತಾಲಿಬಾನ್ ಇದುವರೆಗೂ ತನ್ನನ್ನು ಸಮರ್ಥನೆ ಮಾಡಿಕೊಳ್ಳುತ್ತ ಬಂದ ಟರ್ಕಿ, ರಷ್ಯಾ, ಚೀನಾ, ಪಾಕಿಸ್ತಾನ, ಇರಾನ್ ಮತ್ತು ಕತಾರ್ ದೇಶಗಳಿಗೆ ಈ ಆಹ್ವಾನವನ್ನು ಕಳಿಸಿದೆ.
ತಾಲಿಬಾನ್ ಪರವಿರುವ ಟ್ವಿಟ್ಟರ್ ಖಾತೆಯೊಂದು ಈ ರೀತಿ ಟ್ವಿಟ್ ಮಾಡಿದೆ “ನೂತನ ಸರ್ಕಾರ ರಚಿಸುವ ಕುರಿತಾದ ಈ ಸಭೆಗೆ ಇಸ್ಲಾಮಿಕ್ ಎಮಿರೇಟ್ಸ್ ಪಾಕಿಸ್ತಾನ,ಟರ್ಕಿ, ಕತಾರ್, ರಷ್ಯಾ, ಚೀನಾ ಮತ್ತು ಇರಾನ್ ರಾಷ್ಟ್ರಗಳನ್ನು ಆಹ್ವಾನಿಸುತ್ತಿದೆ”