ಬೆಂಗಳೂರು: ಕೊರೋನಾ ಮೂರನೇ ಅಲೆಯ ಆತಂಕದ ಮಧ್ಯೆಯು ಇಂದಿನಿಂದ ಪ್ರಾಥಮಿಕ ಶಾಲೆಗಳು ಆರಂಭವಾಗ್ತಿವೆ. 6, 7, 8 ನೇ ತರಗತಿಗಳು ಆರಂಭವಾಗುತ್ತಿದ್ದು ಬರೋಬ್ಬರಿ 19 ತಿಂಗಳ ನಂತರ ಭೌತಿಕ ತರಗತಿಗಳು ನಡೆಯಲಿವೆ.

ಹೌದು ಕೊರೊನಾ ಮೂರನೇ ಅಲೆಯ ಆತಂಕದ ಮಧ್ಯೆಯೇ ಈಗಾಗಲೇ 9 ರಿಂದ 12ನೇ ಭೌತಿಕ ತರಗತಿಗಳು ಆರಂಭವಾಗಿದ್ದು ಯಶಸ್ವಿಯಾಗಿ ನಡಿತಿವೆ. ಇದರ ಬೆನ್ನಲ್ಲೇ ಇಂದಿನಿಂದ ಎರಡನೇ ಹಂತದಲ್ಲಿ 6, 7, 8 ನೇ ತರಗತಿಗಳಿಗೆ ಶಾಲೆ ಶುರುವಾಗುತ್ತಿದೆ. ಇನ್ನೂ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ತೆರೆಯಲು ಅವಕಾಶ ನೀಡಲಾಗಿದೆ. 9 ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಈ ಮಾರ್ಗಸೂಚಿಗಳೇ ಅನ್ವಯವಾಗಲಿವೆ.
ಪಾಲಿಸಬೇಕಾದ ನಿಯಮಗಳು
ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯ ಇಲ್ಲಾ. ವಿದ್ಯಾರ್ಥಿಗಳು ಆನ್ಲೈನ್ ತರಗತಿಗೂ ಹಾಜರಾಗಬಹುದಾಗಿದೆ. ವಾರದಲ್ಲಿ ಐದು ದಿನಗಳು ಮಾತ್ರ ಶಾಲೆ ನಡೆಯಲಿದ್ದು, ವಾರಾಂತ್ಯದ 2 ದಿನ ಶಾಲೆಗಳನ್ನು ಸ್ಯಾನಿಟೈಸ್ ಗೆ ಮೀಸಲಿರಿಸಬೇಕು ಎಂದು ಸರ್ಕಾರ ತಿಳಿಸಿದೆ.

ಒಂದು ಬಾರಿ ತರಗತಿಗೆ ಶೇಕಡಾ 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರಲಿದೆ. ಉಳಿದ ವಿದ್ಯಾರ್ಥಿಗಳು ದಿನ ಬಿಟ್ಟು ದಿನ ತರಗತಿಗೆ ಹಾಜರಾಗಬೇಕು. ದೈಹಿಕ ಅಂತರ ಹಾಗೂ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. ಯಾವುದಾದರೂ ಮಗುವಿಗೆ ಕೊರೊನಾ ಲಕ್ಷಣ ಕಂಡುಬಂದರೆ ಅಂತಹ ಮಗು ಶಾಲೆಗೆ ಬರುವಂತಿಲ್ಲ. ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕೊರೊನಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ಶಾಲೆ, ಕಾಲೇಜು ಆವರಣದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಶಿಕ್ಷಕರು, ಶಾಲಾ ಸಿಬ್ಬಂದಿ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು. ಭೌತಿಕ ತರಗತಿಗೆ ವಿದ್ಯಾರ್ಥಿಗಳು ಹಾಜರಾಗಲು ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ.
Primary school reopen Karnataka covid