ಬೆಂಗಳೂರು: ಮೂರು ಮಹಾನಗರ ಪಾಲಿಕೆಯಲ್ಲಿ ಒಂದರಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಆದ್ರೂ ಕಲಬುರಗಿಯಲ್ಲಿ ಕಾಂಗ್ರೆಸ್ ಗೆ ಅಧಿಕಾರ ಸಿಗುತ್ತಾ ಇಲ್ವಾ ಅನ್ನೋದು ದಳಪತಿಗಳ ಮೇಲೆ ನಿರ್ಣಯವಾಗಲಿದೆ.
ಹುಬ್ಬಳ್ಳಿ-ಧಾರವಾಡ ಪೇಡ ಮತ್ತು ಬೆಳಗಾವಿಯ ಕುಂದಾ ಬಿಜೆಪಿಯ ಪಾಲಾಗಿದೆ. ಆದ್ರೆ ತೊಗರಿ ಕಣಜ ಯಾರಿಗೆ ಅನ್ನೋದು ಗೊಂದಲದಲ್ಲಿದೆ. ಕಾಂಗ್ರೆಸ್ ಭದ್ರಕೋಟೆಯನ್ನು ಕಮಲ ಪಾಳಯ ಅಲ್ಲಾಡಿಸಿರೋದು ಮಾತ್ರ ಸತ್ಯ. ಅದಕ್ಕೆ ಫಲಿತಾಂಶದ ಅಂಕಿಗಳೇ ಸಾಕ್ಷಿ.
ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದ ಮತದಾರರಿಗೆ ಧನ್ಯವಾದಗಳು, ಕಾಂಗ್ರೆಸ್ ಪಕ್ಷದ ಮೇಲೆ ಜನರು ವಿಶ್ವಾಸ ಇಟ್ಟಿರುವುದು ಹಾಗೂ ಅಭಿವೃದ್ಧಿ ಕೆಲಸಗಳನ್ನ ಮೆಚ್ಚಿದ್ದು ನಮಗೆ ಸ್ಪೂರ್ತಿದಾಯಕ.
— Karnataka Congress (@INCKarnataka) September 6, 2021
ಮತದಾರರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನ ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡುತ್ತೇವೆ.
ಒಟ್ಟು 54 ವಾರ್ಡ್ ಗಳಲ್ಲಿ ಕಾಂಗ್ರೆಸ್ 26, ಬಿಜೆಪಿ 24, ಜೆಡಿಎಸ್ 4 ಮತ್ತು ಇತತರರು 1 ವಾರ್ಡ್ ನಲ್ಲಿ ಗೆದ್ದಿದೆ. ಮೂರು ಪಕ್ಷಗಳಿಗೆ ಮ್ಯಾಜಿಕ್ ನಂಬರ್ ಸಿಕ್ಕಿಲ್ಲ. ಕಲಬುರಗಿಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಿ ಹೊರ ಬಂದಿದ್ದು, ಯಾರು ಅಧಿಕಾರ ಹಿಡಿಯುತ್ತಾರೆ ಅನ್ನೋದು ಕಾದುನೋಡಬೇಕಿದೆ. ಇದನ್ನೂ ಓದಿ: ಮಂಗಳಾ ಮಿಂಚಿನ ಸಂಚಾರ, ಬಿಜೆಪಿಗೆ ಬೆಳಗಾವಿ ಕುಂದಾ – ಕಾಂಗ್ರೆಸ್ ಎಡವಿದ್ದೆಲ್ಲಿ?