- ಬಿಎಸ್ವೈ ಅನುಪಸ್ಥಿತಿಯಲ್ಲಿಯೂ ಅರಳಿದ ಕಮಲ
ಬೆಂಗಳೂರು: ಬಹುಕುತೂಹಲ ಕೆರಳಿಸಿದ್ದ ಮಹಾನಗರ ಎಲೆಕ್ಷನ್ ರಿಸಲ್ಟ್ ಬಂದಿದೆ. 25 ವರ್ಷದ ಬಳಿಕ ಬಿಜೆಪಿಗೆ ಬೆಳಗಾವಿ ಕುಂದಾ ಸಿಕ್ಕಿದೆ. ಅಂದ್ರೆ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಅಖಾಡಕ್ಕೆ ಇಳಿದಿದ್ದ ಬಿಜೆಪಿ ಇತಿಹಾಸ ಬರೆದಿದೆ. ಬಿಎಸ್‍ವೈ ಪ್ರಚಾರ ಇಲ್ಲದೇ ನಡೆದ ಮೊದಲ ಚುನಾವಣೆ ಇದಾಗಿತ್ತು. ಹಾಗಾಗಿ ಬಿಜೆಪಿಗೆ ಚುನಾವಣೆ ಸವಾಲಾಗಿತ್ತು. ಯಾರೂ ಊಹಿಸದಂತೆ ಬಿಜೆಪಿ ಗೆದ್ರೆ, ಕಲ್ಪನೆಯೂ ಮಾಡದ ರೀತಿ ಕಾಂಗ್ರೆಸ್ ಮಕಾಡೆ ಮಲಗಿದೆ.

ಬೈಎಲೆಕ್ಷನ್‍ನಲ್ಲಿ ತಿಣುಕಾಡಿ ಗೆದ್ದಿದ್ದ ಬಿಜೆಪಿ ಗೆಲ್ಲುತ್ತಾ ಅನ್ನೋ ಅನುಮಾನ ಮೂಡಿತ್ತು. ಇತ್ತ ಕಾಂಗ್ರೆಸ್‍ಗೆ ಇದು ಲಾಭವಾಗಲಿದೆ ಅಂತಾನೇ ಹೇಳಲಾಗಿತ್ತು. ಆದ್ರೆ ಕಾಂಗ್ರೆಸ್ ಮಾಡ್ಕೊಂಡ ಎಡವಟ್ಟುಗಳೇ ಈ ಫಲಿತಾಂಶಕ್ಕೆ ಕಾರಣ ಅಂತ ಹೇಳಲಾಗ್ತಿದೆ. ಆದ್ರೆ ಸೋಲೊಪ್ಪಿಕೊಂಡಿರುವ ಡಿಕೆಶಿ ರಿಸಲ್ಟ್ ಸಮಾಧಾನ ತಂದಿದೆ ಅಂತ ಹೇಳ್ತಾರೆ. ಇತ್ತ ಕೇಸರಿ ಬಣ್ಣದಲ್ಲಿ ಮುಳುಗಿರೋ ಕಮಲ ಕಲಿಗಳು ಇದು ಕಾಂಗ್ರೆಸ್ ಅಂತ್ಯ ಅಂತಾನೇ ಬಿಂಬಿಸ್ತಿದ್ದಾರೆ.

ಹಾಗಾದರೆ ಎಲ್ಲ ಅವಕಾಶಗಳ ಜೊತೆ ಕುಂದಾನಗರಿಯ ಸ್ಟಾರ್ ಲೀಡರ್‍ಗಳೆ ಚುನಾವಣೆ ಅಖಾಡಕ್ಕೆ ಧುಮುಕಿದ್ರೂ ಮಣ್ಣು ಮುಕ್ಕಿದೆ ಎಂದಿನಂತೆ ಜಟ್ಟಿ ಬಿದ್ರೂ ಮೀಸೆ ಮಣ್ ಆಗಲಿಲ್ಲ ಅಂತ ಕೈ ನಾಯಕರು ಹೇಳುತ್ತಿದ್ದಾರೆ.
ಕಾಂಗ್ರೆಸ್ ಸೋಲಿಗೆ ಕಾರಣ
- ಸ್ಥಳೀಯ ನಾಯಕರ ಕಿತ್ತಾಟ
- ಟಿಕೆಟ್ ಹಂಚಿಕೆಯ ಗುದ್ದಾಟ
- ಪ್ರಚಾರಕ್ಕೆ ತೆರಳದ ಸಿದ್ದರಾಮಯ್ಯ
- ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸದ ಕಾಂಗ್ರೆಸ್
- ಸತೀಶ್ ಜಾರಕಿಹೊಳಿ ಮತ್ತು ಫಿರೋಜ್ ಸೇಠ್ ನಡುವಿನ ಶೀತಲ ಸಮರ
- ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಚುನಾವಣೆಯ ಜವಾಬ್ದಾರಿ
- ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸಾ ಕೇಂದ್ರ ಸೇರಿಕೊಂಡಿದ್ದು

ಕಾಂಗ್ರೆಸ್ ವೀಕ್ ನೆಸ್‍ಗಳನ್ನ ಲಾಭವಾಗಿ ಮಾಡ್ಕೊಂಡಿದ್ದು ಬಿಜೆಪಿ. ನೂತನ ಸಂಸದೆ ಮಂಗಳಾ ಅಂಗಡಿಯ ಮಿಂಚಿನ ಸಂಚಾರದ ಜೊತೆ ಗೋವಿಂದ ಕಾರಜೋಳ, ಕಟೀಲ್, ಅಭಯ್ ಪಾಟೀಲ್ ಮತ್ತು ಬೆನಕೆ ತಂತ್ರಗಾರಿಕೆ ವರ್ಕೌಟ್ ಆಗಿದೆ. ಬೆಳಗಾವಿ ಚುನಾವಣೆ ಹೊತ್ತಿದ್ದ ಕುಂದಾ ರಾಣಿ ಲಕ್ಷ್ಮಿ ಹೆಬ್ಬಾಳ್ಕರ್, ಸಾಹುಕಾರ ಸೋದರ ಸತೀಶ್ ಜಾರಕಿಹೊಳಿ ಮತ್ತು ಎಂಬಿ ಪಾಟೀಲ್ ಅಬ್ಬರ ಪ್ರಚಾರಕ್ಕೆ ಮುಂದಾಗಿರೋದು ಬಿಜೆಪಿ ಗೆಲುವಿಗೆ ಕಾರಣ ಅಂತ ಹೇಳಲಾಗ್ತಿದೆ. ಇದನ್ನೂ ಓದಿ: ಸಿಎಂ ಯೋಗಿ ಟೀಕಿಸಿದ್ದ ಮಾಜಿ ಗವರ್ನರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು
ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಪಕ್ಷದ ಚಿಹ್ನೆಯ ಮೇಲೆ ನಡೆದ ಚುನಾವಣೆಯಲ್ಲಿ ಮತದಾರರು, ಬಿಜೆಪಿಯ ಅಭಿವೃದ್ಧಿ ಮಂತ್ರಕ್ಕೆ ಜನಾದೇಶ ನೀಡಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರಿಗೆ, ಪಕ್ಷದ ಎಲ್ಲ ಮುಖಂಡರಿಗೆ, ಗೆದ್ದ ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳು.
— B.S. Yediyurappa (@BSYBJP) September 6, 2021
ಬಿಜೆಪಿ ಗೆಲುವಿಗೆ ಕಾರಣ
- ಬೈ ಎಲೆಕ್ಷನ್ ಗೆಲುವಿನ ಹುರುಪು
- ಭಿನ್ನಾಬಿಪ್ರಾಯಗಳ ಶಮನ, ಬಂಡಾಯ ಸ್ಪರ್ಧಿಗಳ ಉಚ್ಛಾಟನೆ
- ಎಂದಿನಂತೆ ಸಂಘಟನಾತ್ಮಕ ಚಟುವಟಿಕೆ
- ಪಕ್ಷದ ಚಿಹ್ನೆ ಲಾಭವಾಗಿ ಪರಿಣಮಿಸಿದ್ದು
- ಘಟಾನುಘಟಿ ನಾಯಕರ ಅಬ್ಬರದ ಪ್ರಚಾರ
- ಸಚಿವರ ಪ್ರಚಾರದ ಹಂಚಿಕೆ
- ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆಯಿಂದ ಮತ ವಿಭಜನೆ
ಒಟ್ಟಿನಲ್ಲಿ 58 ವಾರ್ಡ್‍ಗಳಲ್ಲಿ ಬಿಜೆಪಿಗೆ ಮ್ಯಾಜಿಕ್ ನಂಬರ್ ಪಡೆದು ಅಧಿಕಾರದ ಗದ್ದುಗೆ ಏರಲಿದೆ. ಬಿಜೆಪಿ 36, ಕಾಂಗ್ರೆಸ್ 9, ಜೆಡಿಎಸ್ 0 ಹಾಗೂ ಇತರರು 13ರಲ್ಲಿ ಗೆದ್ದಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ